ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಂತ್ರ ಖರೀದಿಸಬಾರದೇ?

Last Updated 13 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

ಶಿವಮೊಗ್ಗದಲ್ಲಿ ಒಳಚರಂಡಿ ಸ್ವಚ್ಛಗೊಳಿಸಲು ಹೋದ ಇಬ್ಬರು ಕಾರ್ಮಿಕರು ಮ್ಯಾನ್‌ಹೋಲ್‌ ಒಳಗೆ ಬಿದ್ದು ಪ್ರಾಣ ಬಿಟ್ಟಿರುವ ಸುದ್ದಿಯನ್ನು ಓದಿ ದುಃಖವಾಯಿತು.

ಸರ್ಕಾರವು ವಿವಿಧ ಯೋಜನೆಗಳಿಗೆ ಕೋಟ್ಯಂತರ ರೂಪಾಯಿ ಬಿಡುಗಡೆ ಮಾಡುತ್ತದೆ. ಹೀಗಿರುವಾಗ ಒಳಚರಂಡಿಗಳನ್ನು ಸ್ವಚ್ಛಗೊಳಿಸುವ ಯಂತ್ರಗಳನ್ನು ಖರೀದಿಸಲು ತೊಂದರೆಯಾದರೂ ಏನು? ಕಾರ್ಮಿಕರು ಸತ್ತ ನಂತರ ಅವರ ಕುಟುಂಬದವರಿಗೆ ಪಾಲಿಕೆಯವರು ₹ 10ಲಕ್ಷ ಹಾಗೂ ಸಮಾಜ ಕಲ್ಯಾಣ ಇಲಾಖೆಯವರು ₹ 5 ಲಕ್ಷಪರಿಹಾರ ಕೊಟ್ಟಿದ್ದಾರೆ. ಇದೇ ಹಣದಿಂದ ಮೊದಲೇ ಯಂತ್ರಗಳನ್ನು ಖರೀದಿಸಿದ್ದಿದ್ದರೆ ಕಾರ್ಮಿಕರ ಪ್ರಾಣ ಉಳಿಯುತ್ತಿರಲಿಲ್ಲವೇ?

ಮನೆ ಕಂದಾಯ ಕಟ್ಟುವಾಗ ನಮ್ಮಿಂದ ಎಸ್‌ಡಬ್ಲ್ಯುಎಂಹೆಸರಲ್ಲಿ ಸೆಸ್‌ ಕಟ್ಟಿಸಿಕೊಳ್ಳಲಾಗುತ್ತದೆ. ಇದರಿಂದ ಒಂದಿಷ್ಟು ಹಣವನ್ನು ಒಳಚರಂಡಿ ಸ್ವಚ್ಛಗೊಳಿಸುವ ಯಂತ್ರಗಳ ಖರೀದಿಗೆ ವ್ಯಯಿಸಬಹುದಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT