ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಎಲೋರ್ಡಾ ಕಪ್:  ಫೈನಲ್ ಪ್ರವೇಶಿಸಿದ ನಾಲ್ವರು ಬಾಕ್ಸರ್‌ಗಳು

Published 16 ಮೇ 2024, 18:34 IST
Last Updated 16 ಮೇ 2024, 18:34 IST
ಅಕ್ಷರ ಗಾತ್ರ

ಅಸ್ತಾನಾ (ಕಜಕಸ್ತಾನ) (ಪಿಟಿಐ):  ಎಲೋರ್ಡಾ ಕಪ್ ಮಹಿಳಾ 52 ಕೆ.ಜಿ ವಿಭಾಗದಲ್ಲಿ ಹಾಲಿ ವಿಶ್ವ ಚಾಂಪಿಯನ್ ನಿಖಾತ್ ಝರೀನ್ ಕಜಕಸ್ತಾನದ ಟೊಮಿರಿಸ್ ಮಿರ್ಜಾಕುಲ್ ವಿರುದ್ಧ 5-0 ಅಂತರದಲ್ಲಿ ರೋಚಕ ಗೆಲುವು ಸಾಧಿಸಿ ಫೈನಲ್‌ ಪ್ರವೇಶಿಸಿದ್ದಾರೆ.

ನಿಖತ್ ಅವರಲ್ಲದೆ, ಮಿನಾಕ್ಷಿ (48 ಕೆಜಿ), ಅನಾಮಿಕಾ (50 ಕೆಜಿ) ಮತ್ತು ಮನೀಷಾ (60 ಕೆಜಿ) ಕೂಡ ಸುಲಭವಾಗಿ ಫೈನಲ್‌ ಪ್ರವೇಶಿಸಿದರು. 

ಮಿನಾಕ್ಷಿ ಮತ್ತು ಮನೀಷಾ ತಮ್ಮ ಸೆಮಿಫೈನಲ್ ಪಂದ್ಯಗಳಲ್ಲಿ ಇದೇ ರೀತಿಯ ಪ್ರದರ್ಶನವನ್ನು ನೀಡಿ ಕ್ರಮವಾಗಿ ಕಜಕಸ್ತಾನದ ಬಾಕ್ಸರ್‌ಗಳಾದ ಗುಲ್ನಾಜ್ ಬುರಿಬಯೇವಾ ಮತ್ತು ತಂಗತರ್ ಅಸ್ಸೆಮ್ ವಿರುದ್ಧ 5-0 ಅಂತರದಿಂದ ಗೆಲುವು ಸಾಧಿಸಿದರು.

ಮತ್ತೊಂದೆಡೆ, ಅನಾಮಿಕಾ ಅವರ ಎದುರಾಳಿ ಕಜಕಸ್ತಾನದ ಗುಲ್ನಾರ್ ತುರಾಪೆ ಅವರನ್ನು ಮೂರು ಎಚ್ಚರಿಕೆಗಳ ನಂತರ ಅತಿಯಾದ ಹಿಡಿತಕ್ಕಾಗಿ ಅನರ್ಹಗೊಳಿಸಿದ ನಂತರ ವಿಜಯಶಾಲಿ ಎಂದು ನಿರ್ಧರಿಸಲಾಯಿತು.

ಆದಾಗ್ಯೂ, ಸೋನು (63 ಕೆಜಿ) ಮತ್ತು ಮಂಜು ಬಾಂಬೋರಿಯಾ (66 ಕೆಜಿ) ತಮ್ಮ ಕೊನೆಯ 4 ಮುಖಾಮುಖಿಗಳಲ್ಲಿ  ಸೋಲುಗಳನ್ನು ಅನುಭವಿಸಿದ ನಂತರ ಕಂಚಿನ ಪದಕಗಳೊಂದಿಗೆ ತಮ್ಮ ಅಭಿಯಾನವನ್ನು ಕೊನೆಗೊಳಿಸಿದರು.

ಸೋನು ಸೂದ್ ಉಜ್ಬೇಕಿಸ್ತಾನದ ಜೀಡಾ ಯರಶೆವಾ ವಿರುದ್ಧ 2-3 ಅಂತರದಲ್ಲಿ ಸೋತರೆ, ಮಂಜು ಬಾಂಬೋರಿಯಾ ಚೀನಾದ ಲಿಯು ಯಾಂಗ್ ವಿರುದ್ಧ 0-5 ಅಂತರದಲ್ಲಿ ಸೋತರು.

ಶಲಾಖಾ ಸಿಂಗ್ ಸಂಸನ್ವಾಲ್ (70 ಕೆಜಿ) ಮತ್ತು ಮೋನಿಕಾ (81+ ಕೆಜಿ)  ಸೆಮಿಫೈನಲ್‌ನಲ್ಲಿ ಆಡಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT