ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಶೈಕ್ಷಣಿಕ ಪ್ರಯೋಗ ಸ್ವಾಗತಾರ್ಹ

ಅಕ್ಷರ ಗಾತ್ರ

ಪ‍ರಿಷ್ಕೃತ ಪಠ್ಯದ ಕುರಿತು ಸರ್ಕಾರವು ಸಾರ್ವಜನಿಕರಿಂದ ಆಕ್ಷೇಪ ಆಹ್ವಾನಿಸುವುದು ಜೇನುಗೂಡಿಗೆ ಕಲ್ಲೆಸೆದಂತೆ ಎಂದು ಹೇಳಿರುವ ಡಾ. ರಾಜಪ್ಪ ದಳವಾಯಿ ಅವರ ಲೇಖನ (ಪ್ರ.ವಾ., ಜೂನ್‌ 11) ಶೈಕ್ಷಣಿಕ ಪರಿಪೂರ್ಣತೆಯ ಒಳನೋಟವನ್ನು ಕಟ್ಟಿಕೊಡುವುದಿಲ್ಲ. ಬದಲಿಗೆ, ಜನರಿಗೆ ಸಿಗಬೇಕಾದ ಜ್ಞಾನ ವಿಸ್ತರಣೆಯನ್ನು ಕುಬ್ಜಗೊಳಿಸುತ್ತದೆ.

ಎಲ್ಲ ಬಗೆಯ ಭ್ರಷ್ಟಾಚಾರಕ್ಕೂ ಚುನಾವಣೆಯೇ ಮೂಲ ಎಂಬ ಕಾರಣಕ್ಕೆ ಚುನಾವಣಾ ಪ್ರಕ್ರಿಯೆಯನ್ನೇ ಸ್ಥಗಿತಗೊಳಿಸಿ, ಅಧಿಕಾರಿಗಳ ಕೈಗೆ ಆಡಳಿತ ನೀಡಿದರೆ ಪ್ರಜಾಪ್ರಭುತ್ವ ಉಳಿಯುತ್ತದೆಯೇ? ಹಾಗೆಯೇ ರಾಜ್ಯದಲ್ಲಿರುವ ಪ್ರತೀ ಜಾತಿಗೂ ತನ್ನದೇ ಅಸ್ಮಿತೆ ಕಂಡುಕೊಳ್ಳಬೇಕೆನ್ನುವ ಹಕ್ಕು ಇರುತ್ತದೆ. ಆದರೆ ಪಠ್ಯಪುಸ್ತಕದಲ್ಲಿನ ವಿಷಯಗಳು ಹೇಗಿರುತ್ತವೆ ಎಂದರೆ, ಹಿಂದುಳಿದ ಬಲಾಢ್ಯ ಗುಂಪಿನ ಚರಿತ್ರೆ ದೊಡ್ಡದಿರುತ್ತದೆ. ಶಕ್ತಿಯುತ ಸಾಧನೆ ಮಾಡಿದ, ವಿಶೇಷ ಹೆಗ್ಗಳಿಕೆಗೆ ಪಾತ್ರನಾದ ಮತ್ತ್ಯಾವುದೋ ಜಾತಿಯ ಪ್ರಮುಖ ನೇತಾರನದು ಸಾಸಿವೆ ಕಾಳಿನಷ್ಟಿರುತ್ತದೆ. ಇಂತಹ ತಾರತಮ್ಯ, ಅನ್ಯಾಯ ಸಾಮಾಜಿಕ ನ್ಯಾಯದ ಘೋಷಣೆ ಅಡಿಯಲ್ಲಿಯೇ ಕೆಲವೊಮ್ಮೆ ಜರುಗುತ್ತದೆ. ಈ ಹಿನ್ನೆಲೆಯಲ್ಲಿ ತಿಳಿವು ಮೂಡಿಸಲು ಸರ್ಕಾರ ಹೊಸ ಶೈಕ್ಷಣಿಕ ಪ್ರಯೋಗ ಮಾಡಿದರೆ ಅದನ್ನು ಸ್ವಾಗತಿಸಬೇಕು. ಬದಲಾಗಿ ವಿರೋಧಿಸಿದರೆ ಅದು ಅವರ ಚಿಂತನೆಯ ಮಿತಿ ಅಷ್ಟೇ.

- ಆರ್.ವೆಂಕಟರಾಜು, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT