ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಭದ್ರತೆ ನೆಪದಲ್ಲಿ ತೊಂದರೆ ಸಲ್ಲ

ಅಕ್ಷರ ಗಾತ್ರ

ರಾಜ್ಯಪಾಲ ಥಾವರಚಂದ್ ಗೆಹಲೋತ್‌ ಅವರು ಶಿವಮೊಗ್ಗದಲ್ಲಿ ಕಾರ್ಯಕ್ರಮ ಮುಗಿಸಿ ಬೆಂಗಳೂರಿಗೆ ಹೋಗುವ ಮಾರ್ಗಮಧ್ಯ ಮಧ್ಯಾಹ್ನ 3 ಗಂಟೆಯಲ್ಲಿ ಸುಮಾರು 15 ನಿಮಿಷ ಚಿತ್ರದುರ್ಗ ನಗರದ ಹೃದಯ ಭಾಗದಲ್ಲಿನ ಪ್ರವಾಸಿ ಮಂದಿರದಲ್ಲಿ ತಂಗಿದ್ದರು. ಇವರು ಚಿತ್ರದುರ್ಗಕ್ಕೆ ಆಗಮಿಸುವ ಎರಡು ಗಂಟೆ ಮುಂಚೆಯೇ ತಂಗುವ ಸ್ಥಳದ ಸುತ್ತ ಭದ್ರತೆ ದೃಷ್ಟಿಯಿಂದ ಸುಮಾರು ಒಂದು ಕಿ.ಮೀ. ಉದ್ದದ ರಸ್ತೆಯುದ್ದಕ್ಕೂ ಪೊಲೀಸರು ಅಂಗಡಿಗಳನ್ನು ಮುಚ್ಚಿಸಿದ್ದರು. ಇದಲ್ಲದೆ ಪ್ರಧಾನ ರಸ್ತೆ ಹಾಗೂ ಅದನ್ನು ಸಂಪರ್ಕಿಸುವ ಎಲ್ಲಾ ರಸ್ತೆಗಳಲ್ಲಿ ಒಂದು ಗಂಟೆ ಕಾಲ ಸಂಚಾರ ನಿರ್ಬಂಧಿಸಿದ್ದರು. ಇದರಿಂದ ಸಾಮಾನ್ಯ ಜನರಿಗೆ ಬಹಳಷ್ಟು ತೊಂದರೆಯಾಯಿತು ಮತ್ತು ಬೇಸರ ಉಂಟಾಯಿತು. ಅವರು ತಂಗುವ ಸ್ಥಳದಿಂದ ಸುತ್ತಲೂ ನೂರು ಮೀಟರ್ ದೂರದವರೆಗೆ ನಿರ್ಬಂಧ ಹೇರಿದರೆ ಅಷ್ಟಾಗಿ ತೊಂದರೆ ಆಗದು.

ವಿವಿಐಪಿಗಳಿಗೆ ಭದ್ರತೆ ಒದಗಿಸುವುದು ಪೊಲೀಸರ ಕರ್ತವ್ಯ ನಿಜ. ಆದರೆ ಅದಕ್ಕಾಗಿ ಜನರಿಗೆ ಈ ಪರಿ ತೊಂದರೆ ನೀಡುವುದು ಸಲ್ಲ. ತಮ್ಮ ಓಡಾಟದಲ್ಲಿ ಜನಸಾಮಾನ್ಯರಿಗೆ ತೊಂದರೆ ಆಗದಂತೆ ಅಧಿಕಾರಿಗಳು ಮತ್ತು ವಿವಿಐಪಿಗಳು ತಕ್ಷಣ ಗಮನ ಹರಿಸುವುದು ಸೂಕ್ತ.

- ವಿ.ತಿಪ್ಪೇಸ್ವಾಮಿ,ಹಿರಿಯೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT