ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಮಹಾನ್‌ ಸಾಧಕನಿಗೆ ಸಿಗದ ಪ್ರಚಾರ

ಅಕ್ಷರ ಗಾತ್ರ

ಕೊಡಗಿನ ಏಳುನೂರು ಎಕರೆ ಖಾಸಗಿ ಕಾಡಿನ ಮಾಲೀಕ ಡಾ. ಅನಿಲ್ ಮಲ್ಹೋತ್ರ ಎಂಬ ಮಹಾನ್ ವ್ಯಕ್ತಿಯೊಬ್ಬರ ಸಾಧನೆಗೆ ಮಾಧ್ಯಮಗಳಲ್ಲಿ ಸೂಕ್ತ ಮನ್ನಣೆ ಸಿಗಲಿಲ್ಲವೇಕೆ?

ತಾಪಮಾನ ಹೆಚ್ಚಳ ಎಂಬ ವ್ಯಾಪಕ ಕೂಗಿನ ಸಂದರ್ಭದಲ್ಲಿ ಮುಂದಿನ ಹತ್ತು ತಲೆಮಾರು ಅನುಭವಿಸುವಂತಹ ಪರಿಸರದ ನಿರ್ಮಾತೃವೊಬ್ಬರು ನಮ್ಮ ರಾಜ್ಯದಲ್ಲಿದ್ದರು ಎಂಬ ವಿಚಾರವನ್ನು ಹೆಚ್ಚಿನ ಜನಸಾಮಾನ್ಯರು ಇವರ ಮರಣದಿಂದಲೇ ಅರಿಯಬೇಕಾದ ಸಂವಹನದ ಕೊರತೆಗೆ ಯಾರನ್ನು ದೂರಬೇಕು? ಕೇಂದ್ರ ಸರ್ಕಾರವು ‘ಪದ್ಮ’ ಪ್ರಶಸ್ತಿಗಳಿಗೆ ಯೋಗ್ಯರನ್ನು ಆಯ್ಕೆ ಮಾಡುವ ಹಂತದಲ್ಲೂ ಏಷ್ಯಾದಲ್ಲೇ ಪ್ರಖ್ಯಾತರಾದ ಇವರ ಹೆಸರನ್ನು ಕನ್ನಡಿಗರಾರೂ ಸೂಚಿಸಲಿಲ್ಲವೇ? ಸೂತಕದ ಸಂದರ್ಭದಲ್ಲಾದರೂ ಅವರ ಸಾಧನೆಯು ಯುಕ್ತ ರೀತಿಯಲ್ಲಿ ಸ್ಮರಣೆಗೆ ಒಳಗಾಗಿಲ್ಲವೇಕೆ- ಹೀಗೆ ಯೋಚಿಸಿದಾಗಲೆಲ್ಲಾ ಜಾತಿ, ರಾಜಕೀಯ ಹಿನ್ನೆಲೆ, ಅಂಧಾಭಿಮಾನದ ವರ್ತುಲದಲ್ಲೇ ನಾವಿನ್ನೂ ಗಿರಕಿ ಹೊಡಿಯುತ್ತಿದ್ದೇವೆಯೇ ಎಂದೆನಿಸುತ್ತಿದೆ!

- ಗೋಪು ಗೋಖಲೆ, ಶಿಶಿಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT