ಅಧ್ಯಾಪಕರ ನೇಮಕಾತಿ: ವ್ಯಕ್ತಿತ್ವ ಪರೀಕ್ಷೆ ಬೇಡವೇ?

7

ಅಧ್ಯಾಪಕರ ನೇಮಕಾತಿ: ವ್ಯಕ್ತಿತ್ವ ಪರೀಕ್ಷೆ ಬೇಡವೇ?

Published:
Updated:

ವಿಶ್ವವಿದ್ಯಾಲಯಗಳ ಅಧ್ಯಾಪಕರ ನೇಮಕಾತಿ ಕಾರ್ಯವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ವಹಿಸಬೇಕು ಎಂದು ಉನ್ನತ ಶಿಕ್ಷಣ ಸಚಿವರು ಇತ್ತೀಚೆಗೆ ಹೇಳಿದ್ದಾರೆ. ಅಭ್ಯರ್ಥಿಗಳ ಅಂಕ ಮತ್ತು ಪದವಿಯನ್ನು ಮಾತ್ರ ಪರಿಗಣಿಸಿ ಸಿಇಟಿ ಆಧಾರದ ಮೇಲೆ ಆಯ್ಕೆ ಮಾಡುವುದಾದರೆ, ಆ ಅಭ್ಯರ್ಥಿಗೆ ವ್ಯಕ್ತಿತ್ವ ಪರೀಕ್ಷೆಯ ಅವಕಾಶವಿಲ್ಲವೇ? ಅಭ್ಯರ್ಥಿಗೆ ಮಾತನಾಡಲು ಬರುವುದೇ, ಪಾಠ ಮಾಡುವ ಸಾಮರ್ಥ್ಯವಿದೆಯೇ ಎಂಬುದನ್ನು ಗಮನಿಸದೆ ಉತ್ತಮ ಅಧ್ಯಾಪಕರನ್ನು ನೇಮಿಸಲು ಸಾಧ್ಯವೇ?

ಈಗಾಗಲೇ ಸಿಇಟಿ ಆಧಾರದ ಮೇಲೆ ಪದವಿಪೂರ್ವ ಹಾಗೂ ಪದವಿ ಕಾಲೇಜುಗಳಿಗೆ ಪ್ರಾಧ್ಯಾಪಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಸ್ವಾಯತ್ತ ಸಂಸ್ಥೆಗಳಾದ ವಿಶ್ವವಿದ್ಯಾಲಯಗಳ ಅಧ್ಯಾಪಕರನ್ನು ಪರೀಕ್ಷಾ ಪ್ರಾಧಿಕಾರದ ಮೂಲಕ ಆಯ್ಕೆ ಮಾಡುವುದು ಎಷ್ಟು ಸರಿ ಎಂಬ ಬಗ್ಗೆ ಸರ್ಕಾರ ಮತ್ತು ತಜ್ಞರು ಚರ್ಚೆ ಮಾಡಬೇಕಾಗಿದೆ. ಪರೀಕ್ಷಾ ಪ್ರಾಧಿಕಾರವು (ಕೆ.ಇ.ಎ) ಕೇವಲ ಸಿಇಟಿ ಪರೀಕ್ಷೆ ನಡೆಸುವುದಕ್ಕಾಗಿ ಪ್ರಾರಂಭಿಸಲಾದ ಸಂಸ್ಥೆ. ಕರ್ನಾಟಕ ಲೋಕಸೇವಾ ಆಯೋಗವು ಗ್ರೂಪ್ ಎ ಮತ್ತು ಬಿ ದರ್ಜೆಯ ಅಧಿಕಾರಿಗಳು ಹಾಗೂ ಪ್ರಾಧ್ಯಾಪಕರನ್ನು ಸ್ಫರ್ಧಾತ್ಮಕ ಪರೀಕ್ಷೆಗಳೊಂದಿಗೆ ವ್ಯಕ್ತಿತ್ವ ಪರೀಕ್ಷೆಯ ಮೂಲಕ ಆಯ್ಕೆ ಮತ್ತು ನೇಮಕಾತಿ ಮಾಡಿಕೊಡುವ ಸ್ವಾಯತ್ತ ಸಂಸ್ಥೆಯಾಗಿದೆ. ಆದರೆ, ರಾಜಕೀಯ ಹಿತಾಸಕ್ತಿಯಿಂದ, ಸ್ವಾಯತ್ತ ಸಂಸ್ಥೆಯ ಬದಲಿಗೆ ಪರೀಕ್ಷಾ ಪ್ರಾಧಿಕಾರಕ್ಕೆ ಈ ಕಾರ್ಯವನ್ನು ವಹಿಸುವುದು ಸರಿಯಲ್ಲ. ಸರ್ಕಾರ ಈ ಬಗ್ಗೆ ಪುನರ್ ಪರಿಶೀಲನೆ ಮಾಡಬೇಕು.

–ವೆಂಕಟೇಶ ಕೆ.ಟಿ., ವಿಜಯಪುರ

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !