ಬುಧವಾರ, ಆಗಸ್ಟ್ 17, 2022
25 °C

ಅನಗತ್ಯ ಅನುದಾನ: ಮಾದರಿ ನಡೆಯಲ್ಲ

ವಾಚಕರವಾಣಿ Updated:

ಅಕ್ಷರ ಗಾತ್ರ : | |

ಸರ್ಕಾರ ತನ್ನ ನೌಕರರಿಗೆ ತಿಂಗಳ ಸಂಬಳ ನೀಡಲು, ನೆರೆ ಸಂತಸ್ತರಿಗೆ ಪರಿಹಾರ ಕಲ್ಪಿಸಲು, ರೈತರಿಗೆ ಬೆಂಬಲ ಬೆಲೆ ಘೋಷಿಸಲು ಪರದಾಡುತ್ತಾ, ಸಂಪನ್ಮೂಲ ಕ್ರೋಡೀಕರಣಕ್ಕೆ ಸರ್ಕಾರಿ ಜಮೀನುಗಳನ್ನು ಹರಾಜು ಹಾಕುವ ಮಟ್ಟಿಗಿನ ಒತ್ತಡಕ್ಕೆ ಸಿಲುಕಿದೆ. ಹೀಗಿರುವಾಗ ಮಠಮಾನ್ಯಗಳಿಗೆ ಸರ್ಕಾರವು ಕೋಟಿಗಟ್ಟಲೆ ಅನುದಾನ ಬಿಡುಗಡೆ ಮಾಡಲು ಹೊರಟಿದೆ (ಪ್ರ.ವಾ., ಸೆ. 2) ಎಂಬುದು ಏನನ್ನು ಸೂಚಿಸುತ್ತದೆ? ಇದರ ಅಗತ್ಯ ಈಗಿದೆಯೇ?

ಮಠಮಾನ್ಯಗಳು ಸರ್ಕಾರದ ಅನುದಾನವನ್ನು ಅವಲಂಬಿಸಿರುವುದು ಮತ್ತು ಎಲ್ಲ ಸರ್ಕಾರಗಳು ಅದನ್ನು ಪೋಷಿಸಿಕೊಂಡು ಬರುತ್ತಿರುವುದು ಒಳ್ಳೆಯ ನಡೆಯಂತೂ ಅಲ್ಲ. ಸರ್ಕಾರದ ಅನುದಾನ ಪಡೆದು ಹೆಮ್ಮರವಾಗಿ ಬೆಳೆದ ಕೆಲವು ಮಠಗಳು ಆರ್ಥಿಕವಾಗಿ ಬಹಳಷ್ಟು ಸಬಲವಾಗಿವೆ. ಇದೇ ಹಣವನ್ನು ಕಳೆದ ಸಾಲಿನ ನೆರೆ ಸಂತ್ರಸ್ತರಿಗೆ ವಿನಿಯೋಗಿಸಿದ್ದರೆ ಅವರೆಲ್ಲ ಇಂದು ತಮ್ಮ ಸ್ವಂತ ಸೂರಿನಲ್ಲಿ ವಾಸಿಸಬಹುದಿತ್ತು. ಹಾಗೆಯೇ ಕೊರೊನಾ ಸಂದಿಗ್ಧದ ಈ ಪರಿಸ್ಥಿತಿಯಲ್ಲಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ಹಗಲಿರುಳು ದುಡಿಯುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನವಾಗಿ ನೀಡಿದರೆ ಇಡೀ ರಾಜ್ಯದ ಜನ ಮೆಚ್ಚುತ್ತಾರೆ. ಸಂಕಷ್ಟದ ಈ ಸಮಯದಲ್ಲಿ ತನ್ನ ಪ್ರತೀ ನಡೆಯನ್ನೂ ಜನ ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ ಎಂಬ ಅರಿವು ಸರ್ಕಾರಕ್ಕೆ ಇರಬೇಕು.

ಸರ್ದಾರ್ ಎಂ. ತನಾಝ್, ಅರಸೀಕೆರೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.