ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌಢ್ಯದ ಪರಮಾವಧಿ!

Last Updated 9 ಅಕ್ಟೋಬರ್ 2018, 20:15 IST
ಅಕ್ಷರ ಗಾತ್ರ

ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಎಲ್ಲ ವಯಸ್ಸಿನ ಮಹಿಳೆಯರಿಗೆ ಪ್ರವೇಶ ಕಲ್ಪಿಸಿಕೊಟ್ಟ ಸುಪ್ರೀಂ ಕೋರ್ಟ್‌ನ ತೀರ್ಪಿನ ವಿರುದ್ಧ ಕೇರಳದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಮೌಢ್ಯ ಮತ್ತು ಅವಿವೇಕದ ಪರಮಾವಧಿಯೇ ಸರಿ.

ಇಂಥವರ ನಿಲುವನ್ನು ಗಮನಿಸಿದರೆ ನಾವು ಯಾವ ಯುಗದಲ್ಲಿದ್ದೇವೆ ಎಂದು ಪ್ರಶ್ನಿಸಿಕೊಳ್ಳುವಂತಾಗಿದೆ. ‘ಸುಪ್ರೀಂ ಕೋರ್ಟ್‌ ಸೇರಿದಂತೆ ಯಾವುದೇ ನ್ಯಾಯಾಲಯದ ತೀರ್ಪು ಜನರ ಧ್ವನಿಗೆ ಸಮಾನ ಆಗಲಾರದು’ ಎಂದು ಇವರು ವಾದಿಸುತ್ತಾರೆ. ಹಾಗಿದ್ದರೆ ‘ಅಸ್ಪೃಶ್ಯತೆ’ ಮತ್ತು ‘ಸತಿ ಪದ್ಧತಿ’ಯಂಥ ಜೀವ ವಿರೋಧಿ ನೀತಿಗಳನ್ನು ಸಹ ಇದೇ ರೀತಿ ‘ಜನರ ಧ್ವನಿಗೆ ವಿರುದ್ಧ’ ಎಂದು ಸಮರ್ಥಿಸಿಕೊಳ್ಳಬಹುದಲ್ಲ!?

ಸ್ತ್ರೀ ಸಮಾನತೆಗಾಗಿ ಬಸವಣ್ಣ ಕ್ರಾಂತಿಯನ್ನೇ ನಡೆಸಿ, ಇಷ್ಟಲಿಂಗವನ್ನು ಪೂಜಿಸುವ, ಅನುಭವ ಮಂಟಪದಲ್ಲಿ ಪಾಲ್ಗೊಳ್ಳುವ ಅಧಿಕಾರವನ್ನು ಮಹಿಳೆಗೂ ನೀಡಿದರು. ಸುಪ್ರೀಂ ಕೋರ್ಟ್‌ನ ತೀರ್ಪು ಇಂಥದ್ದೇ ಸ್ವಾತಂತ್ರ್ಯವನ್ನು
ಮಹಿಳೆಗೆ ನೀಡಿದೆ. ಹೀಗಿರುವಾಗ ಸ್ತ್ರೀ ವಿರೋಧಿ, ಅನಾಗರಿಕ ಧೋರಣೆಯನ್ನು ಒಡಲಲ್ಲಿಟ್ಟುಕೊಂಡು ಭಾರತ ‘ವಿಶ್ವಗುರು’ ಆಗಬೇಕೆಂದು ಬಯಸುವುದು ಎಷ್ಟರಮಟ್ಟಿಗೆ ಸರಿ?

ಶಿವಕುಮಾರ ಬಂಡೋಳಿ, ಹುಣಸಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT