ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಿಕೆ ಕುಂಠಿತ...

Last Updated 26 ಜುಲೈ 2015, 19:30 IST
ಅಕ್ಷರ ಗಾತ್ರ

‘ಪ್ರಜಾವಾಣಿ’ಯಲ್ಲಿ ಜುಲೈ 18ರಂದು ಪ್ರಕಟವಾದ ಎಂ.ಅಬ್ದುಲ್ ರೆಹಮಾನ್ ಪಾಷ ಅವರ ‘ಭಾಷಾಬೋಧನೆ: ಮರುಚಿಂತನೆ ಅಗತ್ಯ’ ಲೇಖನದ ಬಗ್ಗೆ ಒಂದು ಪ್ರತಿಕ್ರಿಯೆ. ಕಲಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕ ಮತ್ತು ಭಾಷಾವಿಜ್ಞಾನಿ ಡಾ.ಮಲ್ಲಿಕಾರ್ಜುನ್ ಹೇಳುವ ಪ್ರಕಾರ, ಯಾವುದೇ ಬಗೆಯ ಪಠ್ಯಪುಸ್ತಕಗಳು, ಮುಖ್ಯವಾಗಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಮಗ್ರ ಕಲಿಕೆಯನ್ನು ಕುಂಠಿತಗೊಳಿಸುತ್ತವೆ.

ಒಬ್ಬ ಕನ್ನಡ ಭಾಷಾಬೋಧಕಿಯಾಗಿ ನಾನೂ ಇದನ್ನು ಒಪ್ಪುತ್ತೇನೆ. ಪಾಷ ಅವರ ಸಲಹೆಯಂತೆ ಒಂದರಿಂದ ಹತ್ತನೇ ತರಗತಿಯವರೆಗೆ ಮಕ್ಕಳಿಗೆ ಜೀವನೋಪಯೋಗಿಯಂಥ ಕನ್ನಡ ಭಾಷಾ ಕೌಶಲ, ಸಂವಹನ, ಸಂಧಾನ ಕೌಶಲಗಳನ್ನು ಕಲಿಸಬೇಕು. ಅದರಲ್ಲೂ ಮುಖ್ಯವಾಗಿ ಒಂದರಿಂದ ಐದನೇ ತರಗತಿಯವರೆಗೆ ಕಲಿಕೆಯನ್ನು ಪಠ್ಯಪುಸ್ತಕಕ್ಕೆ ಸೀಮಿತಗೊಳಿಸದೆ,  ಮೇಲಿನ ಗುರಿಗಳನ್ನು ಸಾಧಿಸಲು  ಪಠ್ಯಕ್ರಮವನ್ನು (ಪಠ್ಯಪುಸ್ತಕವಲ್ಲ) ರೂಪಿಸಬೇಕು ಮತ್ತು ನಿಗದಿತ ಗುರಿ ಸಾಧಿಸಲು ಶಿಕ್ಷಕರಿಗಾಗಿ ಕಾರ್ಯಾತ್ಮಕ ಕೈಪಿಡಿಗಳನ್ನು ರಚಿಸಬೇಕು. ಸ್ವಲ್ಪವೇ ತರಬೇತಿ, ಓರಿಯಂಟೇಷನ್‌ನಿಂದ ಶಿಕ್ಷಕರು ಪ್ರಾಥಮಿಕ ತರಗತಿಗಳಲ್ಲಿ ಮಕ್ಕಳು ಕನ್ನಡ ಭಾಷಾ ಕೌಶಲಗಳನ್ನು ಕಲಿಯುವುದಕ್ಕೆ ಪೂರಕವಾದ ವಾತಾವರಣ ಸೃಷ್ಟಿಸಲು ಸಾಧ್ಯವಾಗುತ್ತದೆ.

ಭಾಷಾವಿಜ್ಞಾನದ ಹಿನ್ನೆಲೆಯಿಂದ ಬಂದವರಿಗೆ ಇದು ಸಹಜವೂ, ಸುಲಭವೂ, ಕಾರ್ಯಸಾಧುವೂ ಆಗಿ ತೋರದಿರದು. ಆದರೆ, ಇಂಥ ಆಮೂಲಾಗ್ರ ಬದಲಾವಣೆಗಳನ್ನು ಒಪ್ಪಿಕೊಂಡಾಗ ಪಠ್ಯಪುಸ್ತಕ ರೂಪಿಸುವವರಿಗೆ ಸಂಬಂಧಿಸಿದ ಹಲವರಿಗೆ ಕೆಲಸ, ಆದಾಯ ಇಲ್ಲದಂತಾಗುತ್ತದೆ. ಮಕ್ಕಳ ಅಭ್ಯುದಯದಲ್ಲಿ ಇರುವ ಮೂಲ ಸಮಸ್ಯೆ ಇದೇ!     

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT