ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿ 5 ಮೆಟ್ರೊವರೆಗೆ ಬರಲಿ

Last Updated 19 ಡಿಸೆಂಬರ್ 2011, 19:30 IST
ಅಕ್ಷರ ಗಾತ್ರ

ಕಾರ್ಪೊರೇಶನ್- ಕಗ್ಗಲೀಪುರ ನಡುವಿನ ಜಿ 5 ಬಸ್, ಈ ಮಾರ್ಗದಲ್ಲಿ ಸಂಚರಿಸುವವರಿಗೆ ಬಹಳ ಅನುಕೂಲಕರವಾಗಿದೆ. ಆದರೆ ಮತ್ತಷ್ಟು ಬಸ್‌ಗಳನ್ನು ಹಾಕಿ  ಇದನ್ನು ಮಹಾತ್ಮ ಗಾಂಧಿ ರಸ್ತೆಯ ಮೆಟ್ರೊ ನಿಲ್ದಾಣದ ವರೆಗೆ ವಿಸ್ತರಿಸಿದರೆ ಇನ್ನಷ್ಟು ಪ್ರಯೋಜನವಾಗುತ್ತದೆ.

ಏಕೆಂದರೆ ಈ ಮಾರ್ಗದಲ್ಲಿ ಪ್ರಯಾಣಿಸುವವರು ಈಗ ಎರಡು ಮೂರು ಬಸ್‌ಗಳನ್ನು ಬದಲಾಯಿಸಬೇಕಾಗುತ್ತದೆ. ಕನಕಪುರ ರಸ್ತೆಯ ಕಗ್ಗಲೀಪುರದವರೆಗೆ ಯಾವುದೇ ಬಸ್ ಸಂಚರಿಸುವುದಿಲ್ಲ.

ಬಹಳಷ್ಟು ಜನರು ಮಹಾತ್ಮ ಗಾಂಧಿ ರಸ್ತೆಯ ಸುತ್ತಮುತ್ತಲ ಪ್ರದೇಶಗಳಲ್ಲಿ ಕೆಲಸಕ್ಕೆ ಬರುವುದರಿಂದ ನೇರ ಬಸ್‌ನಿಂದ ಅನುಕೂಲವಾಗುತ್ತದೆ. ಸಂಬಂಧಪಟ್ಟವರು ಇತ್ತ ಗಮನಹರಿಸಿ ಜಿ 5 ಬಸ್ಸನ್ನು ಮೆಟ್ರೊವರೆಗೆ ವಿಸ್ತರಿಸಲು ವಿನಂತಿ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT