ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾರಿ ಏಕೆ ಕೊಟ್ಟಿಲ್ಲ?

Last Updated 5 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಸೂರ್ಯನಗರ 2ನೇ ಹಂತದಲ್ಲಿ ಎಂಐಜಿಯಲ್ಲಿ ಮನೆಗಳನ್ನು ಹಂಚಿಕೆ ಮಾಡಿದ್ದಾರೆ. (377-ಎಂಐಜಿ ಸೆಕ್ಟರ್-ಬಿ ಆದರೆ, ಈ ಮನೆಗಳನ್ನು ಪಡೆದುಕೊಂಡವರು ದಿನವೂ ಹಾರುವ ಸಾಹಸಕ್ಕೆ ಕೈ ಹಾಕಬೇಕಿದೆ. ಕಾರಣ: ಮನೆಯ ಒಳಗೆ ಹೋಗಲು ಮನೆಯ ಮುಂದಿರುವ ಡ್ರೈನೇಜ್ ಜಿಗಿಯಬೇಕು. ಅದಕ್ಕೆ ಮುಚ್ಚಳವೇ ಇಲ್ಲ. ಜಿಗಿಯುವಾಗ ಆಯತಪ್ಪಿದರೆ ಅದರೊಳಕ್ಕೆ ಬೀಳುವ ಅಪಾಯ.

ಈ ಬಗ್ಗೆ ಅಧಿಕಾರಿಗಳನ್ನು ವಿಚಾರಿಸಿದರೆ ಮುಚ್ಚಳ ಇನ್ನೂ ಮಂಜೂರಾಗಿಲ್ಲ ಎಂಬ ಸಿದ್ಧ ಉತ್ತರ ಸಿಗುತ್ತದೆ. ಇಲ್ಲಿನ ಎಲ್ಲ ಮನೆಗಳ ಬಾಗಿಲು ಮುಂದೆಯೂ ತೆರೆದ ಚರಂಡಿ ಇದೆ. ಇದು ಸಾಂಕ್ರಾಮಿಕ ರೋಗ ಹರಡಲು ಕಾರಣವಾಗಿದೆ. ಆದ್ದರಿಂದ ನಾಗರಿಕರ ಆರೋಗ್ಯದ ದೃಷ್ಟಿಯಿಂದಲಾದರೂ ಸಂಬಂಧಿಸಿದವರು ತೆರೆದ ಒಳಚರಂಡಿ ಮೇಲೆ ಮುಚ್ಚಳ ಹಾಕಿಸಿ ಕೊಡಬೇಕೆಂದು ವಿನಂತಿ.
 

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT