ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋವು ಮತ್ತು ಶಾಪ

Last Updated 15 ಏಪ್ರಿಲ್ 2016, 19:30 IST
ಅಕ್ಷರ ಗಾತ್ರ

‘ನೊಂದವರು ಶಪಿಸಬೇಕಿಲ್ಲ...’ ಎಂಬ  ಗಾದೆ ಇದೆ. ತಮ್ಮದೇನೂ ತಪ್ಪಿಲ್ಲದಿದ್ದರೂ ಮತ್ತೊಬ್ಬರಿಂದ ನೋವು ತಿಂದಾಗ ಆ ನೋವೇ ನೋವನ್ನು ನೀಡಿದವರಿಗೆ ಶಾಪವಾಗುತ್ತದೆ ಮತ್ತು ಅವರಿಗೆ ಕೆಟ್ಟದಾಗುತ್ತದೆ. ಈ ಮಾತು ಅಜ್ಜಿ, ಮುತ್ತಜ್ಜಿಯ ಕಾಲದಿಂದಲೂ ಬಂದಿರುವ ಮಾತು. ಅನೇಕ ಸಂದರ್ಭಗಳಲ್ಲಿ ಜನರಿಗೆ ಅನುಭವಕ್ಕೂ ಬಂದಿರಬಹುದು.

ಪಿ.ಯು.ಸಿ. ಮಕ್ಕಳ ಪೋಷಕರೆಲ್ಲರೂ ಸ್ಥಿತಿವಂತರಾಗಿರುವುದಿಲ್ಲ.  ಮಕ್ಕಳು ಮುಂದೆ ಬರಲೆಂದು ಚೀಟಿ ಕಟ್ಟಿ, ಸಾಲ ಮಾಡಿ ಓದಿಸುವವರೇ ಹೆಚ್ಚು. ಈ ಮಕ್ಕಳ ಭವಿಷ್ಯದ ಜೊತೆ ಆಡುವುದು ಎಷ್ಟು ಸರಿ? ಇನ್ನು ಮೌಲ್ಯಮಾಪಕರು ತಮಗೆ ಬರಬೇಕಾಗಿರುವ ಹಳೆಯ ಬಾಕಿಯ ಬಗ್ಗೆ ನೂರಾರು ಕನಸು ಕಟ್ಟಿರುತ್ತಾರೆ.

ತಮ್ಮ ಸಮಸ್ಯೆಗಳನ್ನೆಲ್ಲಾ ಬದಿಗಿಟ್ಟು ಮಕ್ಕಳಿಗೆ ಪಾಠ ಹೇಳುವುದಿಲ್ಲವೇ? ಯಾರದೋ ಹಣದಿಂದ ಶ್ರೀಮಂತರಾಗಿ ಆರಾಮ ಜೀವನ ನಡೆಸುತ್ತಿರುವವರನ್ನು ಕಂಡು ‘God sees the truth but waits’ ಎಂದು ಸಮಾಧಾನ ಹೊಂದುವ ಬದಲು, ಮುಷ್ಕರ ಮಾಡುತ್ತಿರುವ ಉಪನ್ಯಾಸಕರ ನೋವು ಸಂಬಂಧಪಟ್ಟವರಿಗೆ ಶೀಘ್ರ ಶಾಪವಾಗಲಿ ಎನ್ನೋಣವೇ? ಹೀಗಾದರೂ ಮುಂದಿನ ಅಧಿಕಾರಿಗಳಿಗೆ ಪಾಠವಾಗಬಹುದು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT