ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಹಾರ ಸಿಕ್ಕಿದೆಯೇ?

Last Updated 2 ಸೆಪ್ಟೆಂಬರ್ 2015, 19:46 IST
ಅಕ್ಷರ ಗಾತ್ರ

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಹಾಗೂ ಕೇಂದ್ರ– ರಾಜ್ಯ ಸರ್ಕಾರಗಳ ಆಡಳಿತ ವೈಖರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಲು ಸಂಘಟನೆಗಳು ಕಂಡುಕೊಂಡಿರುವ ಅಸ್ತ್ರವೇ ‘ಬಂದ್’. 

ಬಂದ್ ವೇಳೆ ಸಂಚಾರ, ಅಂಗಡಿ-ಮುಂಗಟ್ಟು ಸ್ಥಗಿತ, ಪ್ರತಿಭಟನೆ, ಹಿಂಸಾಚಾರ ಸಾಮಾನ್ಯ. ಆದರೆ ಈವರೆಗೆ ನಡೆದಿರುವ ಎಷ್ಟು ‘ಬಂದ್’ಗಳು ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಂಡಿವೆ ಎಂದು ಕೇಳಬೇಕಾದ ಸಂದರ್ಭ ಈಗ ಬಂದಿದೆ. ಯಾಕೆಂದರೆ ಆಕ್ರೋಶ, ಸಿಟ್ಟನ್ನು ವ್ಯಕ್ತಪಡಿಸುವ ಪರ್ಯಾಯ ಮಾರ್ಗವಾದ ಬಂದ್‌ ಈಗ ತೋರಿಕೆಯ ಪ್ರಹಸನವಾಗುತ್ತಿದೆ. ಅಲ್ಲದೆ ಇದು ಜನರಿಗೆ ಮತ್ತಷ್ಟು ಹಿಂಸೆ ಕೊಡುತ್ತದೆಯೇ ಹೊರತು ಲಾಭವನ್ನಲ್ಲ.

ಬಂದ್ ಕಾರಣಕ್ಕೆ ದೊರೆಯುವ ರಜೆ ವಿದ್ಯಾರ್ಥಿಗಳಿಗೆ, ನೌಕರರಿಗೆ ಸ್ಪಲ್ಪಮಟ್ಟಿಗೆ ಖುಷಿ ನೀಡಬಹುದು. ಖಾಸಗಿ ವಾಹನಗಳು, ಆಟೊ, ಟ್ಯಾಕ್ಸಿಗಳ ಚಾಲಕರು, ಮಾಲೀಕರು ದುಪ್ಪಟ್ಟು ಹಣ ಮಾಡಿಕೊಳ್ಳಬಹುದು. ಆದರೆ ರೋಗಿಗಳ ಪಾಲಿಗೆ ಜೀವವನ್ನೇ ಕೈಯಲ್ಲಿಡಿದು ಬದುಕುವ ದಿನವೂ ಹೌದು. ನಿಜವಾಗಲೂ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಬಂದ್‌ನಿಂದ ಸಾಧ್ಯವಾಗಿದೆಯೇ ಎಂಬ ಪ್ರಶ್ನೆಗೆ ಬಂದ್‌ಗೆ ಕರೆ ನೀಡುವ ಸಂಘಟನೆಗಳು ಉತ್ತರ ನೀಡಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT