ಕೊನೆಗೆ ಪ್ರೇಕ್ಷಕ ತನಗೇ ಇಷ್ಟವಾಗುವುದನ್ನು ಆಯ್ಕೆ ಮಾಡಿಕೊಳ್ಳುತ್ತಾನೆ. ಸದಭಿರುಚಿಯುಳ್ಳ, ಜನರಿಗೆ ತಲುಪುವ ಕಾರ್ಯಕ್ರಮಗಳು ಯಶಸ್ವಿಯಾಗುತ್ತವೆ. ಒಟ್ಟಿನಲ್ಲಿ ಡಬ್ಬಿಂಗ್ ನಿಷೇಧದ ಸುತ್ತಮುತ್ತ ಕೆಲವರು ಕಟ್ಟಿಕೊಂಡಿರುವ ಪಾಳೇಗಾರಿಕೆ ಕೊನೆಗೊಳ್ಳಲಿ. ಎಲ್ಲ ಬಗೆಯ ಮಾಹಿತಿ, ಮನರಂಜನೆ ಕನ್ನಡಿಗರಿಗೆ ಕನ್ನಡದಲ್ಲೇ ಸಿಗುವಂತಾಗಲಿ.