ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃತ್ತಿಪರತೆ ತೋರಲಿ

Last Updated 5 ಜನವರಿ 2016, 19:46 IST
ಅಕ್ಷರ ಗಾತ್ರ

ಎಂದಿನಂತೆ ಹಾಲಿನ ದರ ಏರಿಕೆಗೆ ‘ಉತ್ಪಾದಕರ ಹಿತ ಕಾರಣ’ ಎಂದು ಸರ್ಕಾರ ಹೇಳಿದೆ. ನಿಜ ಸ್ವಾಮಿ, ಉತ್ಪಾದಕರ ಹಿತ ಕಾಯಬೇಕು. ಆದರೆ, ಈ ರೀತಿ ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್‌) ಹಾಲಿನ ಬೆಲೆ ಏರಿಸಿದರೆ ಹಾಲಿನ ಉಪ ಉತ್ಪನ್ನಗಳಾದ ತುಪ್ಪ, ಬೆಣ್ಣೆಯ ದರವೂ ಏರುವುದಿಲ್ಲವೇ?

ಹಾಲಿನ ಬೆಲೆ ಲೀಟರ್‌ಗೆ  ನಾಲ್ಕು ರೂಪಾಯಿ ಏರಿದಲ್ಲಿ, ಅದರ ಇತರ ಉತ್ಪನ್ನಗಳ ಬೆಲೆ ಎರಡು ಪಟ್ಟು ಹೆಚ್ಚಿಗೆ  ಏರುತ್ತದೆ. ಹಾಲಿನ ದರ ಏರಿಕೆಯಿಂದ ಹೋಟೆಲ್‌ನವರು ಕಾಫಿ, ತಿಂಡಿಗಳ ದರ ಏರಿಸುತ್ತಾರೆ. ಹೀಗೆ ಇತರ ಪದಾರ್ಥಗಳ ದರ ಹೆಚ್ಚಳ ಹಾಲು ಉತ್ಪಾದಕರಿಗೂ ಅನ್ವಯವಾಗುತ್ತದೆ. ಈ ಅರಿವು ಸರ್ಕಾರಕ್ಕಾಗಲಿ ಅಥವಾ ಹಾಲು ಮಹಾಮಂಡಳಕ್ಕಾಗಲಿ ಇಲ್ಲವೇ?

ಹಾಲು ಉತ್ಪಾದನೆಯಲ್ಲಿ ಹೆಚ್ಚಳ ಎಂದಾಕ್ಷಣ ಅದನ್ನು ಪುಡಿಯಾಗಿ ಪರಿವರ್ತಿಸುವುದಷ್ಟೇ ಪರಿಹಾರವಲ್ಲ. ಮೊಸರು, ಚೀಸ್ ಮತ್ತಿತರ ಪದಾರ್ಥಗಳನ್ನು ಇನ್ನೂ ಹೆಚ್ಚಿಗೆ ತಯಾರಿಸಿ ಖಾಸಗಿಯವರಿಗೆ ಪೈಪೋಟಿ ನೀಡಬಹುದಲ್ಲವೇ? ಕೆಎಂಎಫ್‌ ದಿಢೀರ್‌ ನಿರ್ಧಾರ ಕೈಗೊಳ್ಳುವ ಬದಲು ವೃತ್ತಿಪರತೆ ತೋರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT