ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ ಇಲಾಖೆಯ ಪುಸ್ತಕ ವ್ಯಾಪಾರ

Last Updated 12 ಫೆಬ್ರುವರಿ 2014, 19:30 IST
ಅಕ್ಷರ ಗಾತ್ರ

ಒಂಬತ್ತನೇ ತರಗತಿಯ ಹುಡುಗಿಯೊಬ್ಬಳು ತನ್ನ ವಿಜ್ಞಾನ ಪಠ್ಯಪುಸ್ತಕದ 12 ಪುಟಗಳು ಇಲ್ಲವೇ ಇಲ್ಲ. ಏನು ಮಾಡು­ವುದು ಎಂದು ಗೋಳಾಡುತ್ತಿದ್ದಳು. ‘ಅದನ್ನು (ಉಚಿತವಾಗಿ) ಪೂರೈಕೆ ಮಾಡಿದ ನಿನ್ನ ಶಾಲಾ ಶಿಕ್ಷಕರಿಗೆ ಕೇಳು’ ಎಂದು ಹೇಳಿದೆ. ಶಿಕ್ಷಕರು ‘ಆ ಪುಟಗಳನ್ನು ಜೆರಾಕ್ಸ ಮಾಡಿಸಿ­ಕೊಂಡು ಬಿಡು’ ಎಂದು ಸೂಚಿಸಿದರಂತೆ (ಜೆರಾಕ್ಸ ಪ್ರತಿ­ಯಲ್ಲಿ ಚಿತ್ರಗಳು ಬಣ್ಣದ್ದಾಗಿರುವುದಿಲ್ಲ).

ಅವಳದು ಅನು­ದಾನಿತ ಶಾಲೆಯಾದ್ದರಿಂದ ಪಠ್ಯಪುಸ್ತಕ ಉಚಿತವಾಗಿ ಪೂರೈಕೆಯಾಗಿದೆ. ಆದರೆ ಅನುದಾನರಹಿತ ಶಾಲೆಯ ವಿದ್ಯಾ­ರ್ಥಿಗೆ ಹೀಗಾದರೆ, ಹಣ ಕೊಟ್ಟು ಪಠ್ಯಪುಸ್ತಕ ಕೊಂಡಿರು­ವುದರಿಂದ  ‘ಗ್ರಾಹಕ ಹಿತರಕ್ಷಣಾ ಕಾಯ್ದೆ’ ಅನ್ವಯ ದೂರು ಸಲ್ಲಿಸಬಹುದಾಗಿದೆ. ಉಚಿತವಾಗಿ ಇಲಾಖೆಯಿಂದ ಒಬ್ಬ ವಿದ್ಯಾರ್ಥಿಗೆ ಪೂರೈಕೆಯಾದ ಪಠ್ಯ ಪುಸ್ತಕವಾದರೂ ದೋಷಪೂರಿತವಾಗಿದ್ದರೆ ಅದನ್ನು ಸರಿಪಡಿಸುವ ವ್ಯವಸ್ಥೆ ಇಲ್ಲದಿದ್ದರೆ ಅನ್ಯಾಯವಾಗುತ್ತದೆ.

ಠ್ಯಪುಸ್ತಕ ಕಳೆದು­ಹೋದರೆ ಅಥವಾ ಹಾಳಾದರೆ ಬೇರೆ ಪಠ್ಯಪುಸ್ತಕ ಕೊಳ್ಳಲು ಈಗ ಭಾರೀ ಪರದಾಟ ಆಗುತ್ತದೆ.  ಬ್ಯಾಂಕಿನಲ್ಲಿ ಅಥವಾ ಖಜಾನೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ­ಯವರ ಖಾತೆಗೆ ಆ ಪುಸ್ತಕದ ಮುಖಬೆಲೆಯ ಹಣ ತುಂಬಿ, ಕೌಂಟರ್‌ ಫಾಯಿಲ್‌ ಅನ್ನು ತಂದು ತೋರಿಸಿದರೆ,  ಬಿ.ಇ.ಒ. ಕಚೇರಿಯಲ್ಲಿ ಪುಸ್ತಕ (ಅದು ಅಲ್ಲಿದ್ದರೆ) ಪಡೆಯಬಹು­ದಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಪಠ್ಯಪುಸ್ತಕ  ಹೀಗೇನಾದರೂ ಆದರೆ ದೇವರೇ ಅವರನ್ನು ಕಾಪಾಡಬೇಕು!

30–40 ಪುಸ್ತಕದ ಅಂಗಡಿಗಳು ನಡೆಸುವಷ್ಟು ವಹಿವಾಟು ಬಿ.ಇ.ಒ. ಕಚೇರಿಗಳು ನಡೆಸುತ್ತಿವೆ. ಪ್ರತ್ಯೇಕ ಸಿಬ್ಬಂದಿ ಇಲ್ಲ. ಶಿಕ್ಷಕರೇ ಪುಸ್ತಕ ವಿತರಣಕಾರರೂ ಹಾಗೂ ಮಾರಾಟ­ಗಾರರೂ ಆಗಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT