ದಾವಣಗೆರೆ: ‘ಸರ್ಕಾರಿ ಅಧಿಕಾರಿಗಳಲ್ಲಿ ಕರ್ತವ್ಯಪ್ರಜ್ಞೆ ಜಾಗೃತಗೊಳ್ಳುವುದಕ್ಕೆ ಚುನಾವಣೆಗಳೇ ಬರಬೇಕೆನೋ’ ಎಂದು ದಾವಣಗೆರೆಯ ಜನರು ಆಡಿಕೊಳ್ಳುವಂತಾಗಿದೆ.

ವಿಧಾನಸಭಾ ಚುನಾವಣೆಗೆ ಈಗ ನಾಮಪತ್ರ ಸಲ್ಲಿಕೆಯ ಕಾಲ. ದಾವಣಗೆರೆಯ ಉತ್ತರ ಹಾಗೂ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿಗಳ ಕಚೇರಿಗಳನ್ನು ಪಾಲಿಕೆಯಲ್ಲೇ ಸ್ಥಾಪಿಸಲಾಗಿದೆ.

ಪಾಲಿಕೆ, ಪ್ರತಿನಿತ್ಯ ಸಾಕಷ್ಟು ಸಂಖ್ಯೆಯ ಸಾರ್ವಜನಿಕರು ಎಡತಾಕುವ ಸ್ಥಳ. ಆದರೆ ಈಗ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ವಾಹನಗಳನ್ನು ಆವರಣದಲ್ಲಿ ತರುವಂತಿಲ್ಲ. ನೀರು ಬಂದಿಲ್ಲ; ಕಂದಾಯ ಕಟ್ಟಬೇಕು ಎಂದು ಹತ್ತಾರು ಸಮಸ್ಯೆಗಳನ್ನು ಹೊತ್ತು ಬರುವ ಸಾರ್ವಜನಿಕರನ್ನೂ ಪೊಲೀಸರು ತಡೆದು ತಪಾಸಣೆ ಮಾಡುತ್ತಿದ್ದಾರೆ. ಇದಕ್ಕೆ ತಕರಾರು ತೆಗೆದವರನ್ನು ಹಿರಿಯ ಪೊಲೀಸ್ ಅಧಿಕಾರಿಗಳೇ ಹೊರದಬ್ಬುತ್ತಾರೆ. ಆದರೆ, ನಾಮಪತ್ರ ಸಲ್ಲಿಸಲು ಬರುವ ರಾಜಕಾರಣಿಗಳನ್ನು ಮಾತ್ರ ಹಲ್ಲು ಕಿರಿದು ಸ್ವಾಗತಿಸುತ್ತಾರೆ. ಪೊಲೀಸರ ಈ ‘ಕರ್ತವ್ಯ ಪ್ರಜ್ಞೆ’ಯಿಂದ ನಾಗರಿಕರು ಹೈರಾಣಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.