‘ನಮ್ಮ ಸಂವಿಧಾನ ನಮ್ಮ ಹೆಮ್ಮೆ’

7

‘ನಮ್ಮ ಸಂವಿಧಾನ ನಮ್ಮ ಹೆಮ್ಮೆ’

Published:
Updated:
Deccan Herald

ಬೆಂಗಳೂರು: ‘ನಮ್ಮ ಸಂವಿಧಾನ, ನಮ್ಮ ಹೆಮ್ಮೆ. ನಮ್ಮ ಸಂವಿಧಾನದ ಪರ ನಾವು ನಿಲ್ಲುತ್ತೇವೆ’ ಎಂದು ಹೇಳುತ್ತಾ ರಸ್ತೆಯಲ್ಲಿ ಓಡಾಡುವ ಜನರಿಗೆ ಒಂದು ಕೈಗೆ ತ್ರಿವರ್ಣ ಧ್ವಜ ಮತ್ತು ಇನ್ನೊಂದು ಕೈಗೆ ಸಂವಿಧಾನವಿರುವ ಬಾವುಟವನ್ನು ನೀಡುವುದರ ಮೂಲಕ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದ್ದಾರೆ ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಕಾರ್ಯಕರ್ತರು. 

ಇತ್ತೀಚೆಗೆ ದೆಹಲಿಯ ಜಂತರ್‌ ಮಂತರ್‌ನಲ್ಲಿ ಸಂವಿಧಾನವನ್ನು ಸುಟ್ಟು, ಅಂಬೇಡ್ಕರ್‌ ವಿರುದ್ಧ ಘೋಷಣೆ ಕೂಗಿದ ಘಟನೆ ವರದಿಯಾಗಿತ್ತು. ಇದನ್ನು ಪ್ರತಿರೋಧಿಸಿ ವಿದ್ಯಾರ್ಥಿಗಳು ಶಾಲೆ, ಕಾಲೇಜು, ಹಾಸ್ಟೆಲ್‌, ಬಸ್‌ ಹೀಗೆ ಸಾರ್ವಜನಿಕರಿಗೆ ತ್ರಿವರ್ಣ ಧ್ವಜ ಮತ್ತು ಸಂವಿಧಾನದ ಬಾವುಟ ಕೊಡುವುದರ ಮೂಲದ ಸಂವಿಧಾನ ತಿರಸ್ಕರಿಸಿದವರ ವಿರುದ್ಧ ಪ್ರತಿರೋಧ ಆಂದೋಲನ ನಡೆಸುತ್ತಿದ್ದಾರೆ. 

‘ನಮ್ಮ ದೇಶದ ಸಂವಿಧಾನವು ಸ್ವಾತಂತ್ರ್ಯ ಸಮಾನತೆ ಮತ್ತು ಭ್ರಾತೃತ್ವವನ್ನು ಎತ್ತಿ ಹಿಡಿಯುತ್ತದೆ. ಇಂದು ನಮ್ಮ ಪ್ರಜಾಪ್ರಭುತ್ವ ಇವತ್ತು ಅಪಾಯದಲ್ಲಿದೆ. ನಮ್ಮೆಲ್ಲರ ಹಕ್ಕನ್ನು ರಕ್ಷಣೆ ಮಾಡುವಂತದ್ದು ಸಂವಿಧಾನ. ಈ ಸಂವಿಧಾನವನ್ನೆ ಸುಡುವುದು ಎಂದರೆ ನಮ್ಮೆಲ್ಲರ ಸ್ವಾತಂತ್ರ್ಯದ, ಸಮಾನತೆ, ಭ್ರಾತೃತ್ವದ ಹಕ್ಕನ್ನು ಕಸಿದುಕೊಳ್ಳುವುದೇ ಆಗಿರುತ್ತದೆ. ಸಂವಿಧಾನ ಸುಟ್ಟಿರುವುದನ್ನು ಖಂಡಿಸುತ್ತೇವೆ ಮತ್ತು ನಮ್ಮ ಸಂವಿಧಾನದ ಪರವಾಗಿ ನಾವು ನಿಲ್ಲುತ್ತೇವೆ’ ಎನ್ನುತ್ತಾರೆ ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಕಾರ್ಯಕಾರಿ ಸಮಿತಿ ಸದಸ್ಯ ಸರೋವರ್‌ ಬೆಂಕಿಕೆರೆ.

‘ಸ್ವಾತಂತ್ರ್ಯ ಹೋರಾಟವು 200 ವರ್ಷಗಳ ಕಾಲ ನಡೆದ ಧೀರೋದ್ದಾತ್ತ ಹೋರಾಟದ ಚರಿತ್ರೆ. ಈ ಹೋರಾಟದ ಪ್ರತಿಫಲವಾಗಿ ಬಂದಿರುವಂತಹದ್ದು ಸಂವಿಧಾನ. ಇದನ್ನು ಸುಡುವುದರ ಮೂಲಕ ಸಂವಿಧಾನವನ್ನು ಅವಮಾನ ಮಾಡುತ್ತಿದ್ದಾರೆ.ಇಂದು ಸ್ವಾತಂತ್ರ್ಯ ದಿನಾಚರಣೆ ಶಾಲಾ, ಕಾಲೇಜು, ಬಸ್‌ ನಿಲ್ದಾಣಗಳಲ್ಲಿ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ತ್ರಿವರ್ಣ ಧ್ವಜ ಮತ್ತು ಅದರೊಟ್ಟಿಗೆ ‘I stand with Indian constitution’ ಎಂಬ ಬರಹವಿರುವ ಸಂವಿಧಾನ ಧ್ವಜವನ್ನು ನೀಡಿ ನಮ್ಮ ಸಂವಿಧಾನ ಉಳಿವಿಗಾಗಿ ಆಂದೋಲನವನ್ನು ಕೈಗೊಂಡಿದ್ದೇವೆ. ನಾವು ಸಂವಿಧಾನವನ್ನು ಪ್ರೀತಿಸುತ್ತೇವೆ, ಗೌರವಿಸುತ್ತೇವೆ. ಈ ಸಂವಿಧಾನದ ಪರವಾಗಿ ನಿಲ್ಲುತ್ತೇವೆ. ಹಾಗಾಗಿ ಸಂವಿಧಾನವನ್ನು ಸುಟ್ಟಿರುವುದನ್ನು ಪ್ರತಿರೋಧಿಸಿ ರಾಜ್ಯದಾದ್ಯಂತ ಆಂದೋಲನವನ್ನು ನಡೆಸುತ್ತಿದ್ದೇವೆ’ ಎಂದು ಅವರು ಆಂದೋಲನದ ಬಗ್ಗೆ ಮಾಹಿತಿ ನೀಡಿದರು. 

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !