ಲಾಠಿ ನಿಲುವು, ಕುಂಚದ ಒಲವು...

7
ಕಲಾಪ

ಲಾಠಿ ನಿಲುವು, ಕುಂಚದ ಒಲವು...

Published:
Updated:
ಕಲಾಕೃತಿ ವೀಕ್ಷಣೆಯಲ್ಲಿ ನಟ ಯಶ್ ಮತ್ತು ಡಿಜಿ–ಐಜಿಪಿ ನೀಲಮಣಿ ರಾಜು

ಪೊಲೀಸರು ಎಂದರೆ ಒರಟು, ಖಡಕ್‌ ಎಂಬಿತ್ಯಾದಿ ಭಾವನೆಗಳು ಸಾಮಾನ್ಯವಾಗಿ ಜನರಲ್ಲಿ ಮೂಡುತ್ತದೆ. ಆದರೆ ಅವರೊಳಗೊಬ್ಬ ಸಂಗೀತಕಾರನೋ, ಕಲಾವಿದನೋ, ಕವಿಯೋ ಇದ್ದಾನೆ ಎಂದರೆ ನೀವು ನಂಬಬೇಕು. ತಮ್ಮಲ್ಲಿನ ಕಲಾಪ್ರತಿಭೆಯನ್ನು ಹೊರ ಜಗತ್ತಿಗೆ ತೋರಿಸಲು ಒಂದು ಅವಕಾಶಕ್ಕಾಗಿ ಕಾಯುತ್ತಿದ್ದ ಕರ್ನಾಟಕ ರಾಜ್ಯ ಪೊಲೀಸ್‌ ಇಲಾಖೆಯ ಸಿಬ್ಬಂದಿಗೆ ರೀವ್ಸ್‌ ಸಂಸ್ಥೆ ಅವಕಾಶ ಮಾಡಿಕೊಟ್ಟಿತು.

ಚಿತ್ರಕಲಾ ಪರಿಷತ್‌ನಲ್ಲಿ ಜೂನ್‌ 28ರಿಂದ ಜುಲೈ ಒಂದರ ತನಕ ಈ ತೆರೆಮರೆಯ ಕಲಾವಿದರ ವರ್ಣಚಿತ್ರಗಳು ಹಾಗೂ ಛಾಯಾಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ.

19 ಜನ ಕಲಾವಿದರ ಸುಮಾರು 70ಕ್ಕೂ ಹೆಚ್ಚು ಕಲಾಕೃತಿಗಳು ಇಲ್ಲಿ ಪ್ರದರ್ಶನಗೊಂಡಿದೆ. ಪೊಲೀಸ್‌ ಎಸ್‌ಪಿಯಿಂದ ಕಾನ್‌ಸ್ಟೆಬಲ್ ವರೆಗೆ ಎಲ್ಲರೂ ಭಾಗವಹಿಸಿದ್ದಾರೆ. ಇವರೊಂದಿಗೆ ನಿವೃತ್ತ ಡಿಜಿಪಿ(ಹೋಮ್‌ ಗಾರ್ಡ್‌) ಜೀಜಾ ಹರಿ ಸಿಂಗ್‌ ಕೂಡಾ ತಮ್ಮ ಕಲಾಕೃತಿಯನ್ನು ಪ್ರದರ್ಶನದಲ್ಲಿಟ್ಟು ಇಲಾಖೆಯ ಕಲಾವಿದರಿಗೆ ಬೆಂಬಲ ನೀಡಿದ್ದಾರೆ.

ಯೂ ಟ್ಯೂಬ್‌ ಗುರು!

ಇಲ್ಲಿಯ ಕೆಲವು ಪೊಲೀಸ್‌ ಸಿಬ್ಬಂದಿಗೆ ಯೂಟ್ಯೂಬೇ ಗುರು. ಅಂತರ್ಜಾಲದಲ್ಲಿ ಬರುವ ತರಬೇತಿ ವಿಡಿಯೋಗಳನ್ನು ನೋಡಿ ಕಲಿತಿದ್ದಾರೆ. ‘ನನಗೆ ಚಿತ್ರಕಲೆಯಲ್ಲಿ ಆಸಕ್ತಿ ಇತ್ತು. ಆದರೆ ಯಾವುದೇ ಕಲಾ ಶಾಲೆಗೆ ಸೇರಿ ಕಲಿಯುವ ಅವಕಾಶ ಸಿಗಲಿಲ್ಲ. ಅಂತರ್ಜಾಲದಲ್ಲಿ ಕೆಲವು ತರಬೇತಿ ವಿಡಿಯೋ ನೋಡಿ ಚಿತ್ರಕಲೆಯನ್ನು ಕರಗತ ಮಾಡಿಕೊಂಡೆ.

ಕೆಲಸದ ನಡುವೆ ಬಿಡುವಾದಾಗ ಚಿತ್ರಕಲೆಯಲ್ಲಿ ತೊಡಗಿಕೊಳ್ಳತ್ತಿದ್ದೆ’ ಎಂದು ದಾವಣಗೆರೆಯ ಚಾಂದ್‌ಬಾಷಾ ಹೇಳುತ್ತಾರೆ. ಹಾವೇರಿಯ ಕರಿಯಪ್ಪ ಹಂಚಿನಮನೆ ತಮ್ಮ ಕಲಾಕೃತಿಗಳನ್ನು ದೇಶ ವಿದೇಶಗಳಲ್ಲಿ ಪ್ರದರ್ಶಿಸಿದ ಅನುಭವವನ್ನು ಹಂಚಿಕೊಂಡರು.

ಒತ್ತಡದಿಂದ ಮುಕ್ತಿ

ಒತ್ತಡವನ್ನು ನಿವಾರಿಸಲು ತಮ್ಮಲ್ಲಿನ ಕಲೆಯನ್ನು ಕ್ಯಾನ್ವಾಸ್ ಮೇಲೆ ಇಳಿಸಲು ಆರಂಭಿಸಿದರು. ಒತ್ತಡಗಳಿಂದ ಮುಕ್ತಿ ಸಿಕ್ಕಂತಾಯಿತು ಎಂದು ಇಲ್ಲಿ ಚಿತ್ರ ಪ್ರದರ್ಶನ ಮಾಡಿದ ಬಹುತೇಕ ಕಲಾವಿದ ಪೊಲೀಸರ ಅನುಭವ. ಇವರ ಕಲೆಯಲ್ಲಿನ ಆಸಕ್ತಿಯನ್ನು ಗಮನಿಸಿದ ಮೇಲಾಧಿಕಾರಿಗಳು ಸಂಪೂರ್ಣ ಸಹಕಾರ ನೀಡಿ ಇವರ ಕಲೆಯ ಬೆಳವಣಿಗೆಗೆ ಸಹಕರಿಸಿದರು.

‘ನಾವು ನಮ್ಮ ಸಂತೋಷಕ್ಕೆ ಬಿಡಿಸಿದ ಕಲಾಕೃತಿಗಳನ್ನು ಈ ರೀತಿಯ ದೊಡ್ಡ ವೇದಿಕೆಗಳಲ್ಲಿ ಪ್ರದರ್ಶಿಸುವ ಆರ್ಥಿಕ ಸಾಮರ್ಥ್ಯ ನಮಗಿಲ್ಲ. ಆದರೆ ಇಂತಹ ಅವಕಾಶ ಸಿಕ್ಕಿರುವುದು ನಮಗೆ ಈ ಕಲಾಸಕ್ತಿಯನ್ನು ಮುಂದುವರಿಸಲು ಪ್ರೋತ್ಸಾಹ ಸಿಕ್ಕಂತಾಗಿದೆ’ ಎಂದು ದಾವಣಗೆರೆಯ ನೇತ್ರಾವತಿ ತಮ್ಮ ಸಂತೋಷವನ್ನು ಹಂಚಿಕೊಂಡರು.

ಕಲಾಕೃತಿಗಳನ್ನೂ, ಕಲಾವಿದರನ್ನೂ ಅರಳುಗಣ್ಣಿನಿಂದ ನೋಡುವುದು ಅವರಲ್ಲಿ ಸಂತಸ ಮೂಡಿಸಿದೆ.

**

ಸಮಾಜದಲ್ಲಿ ಬೆಳಕಿಗೆ ಬರದ ಕಲಾವಿದರಿಗೆ ಪ್ರದರ್ಶನ ವೇದಿಕೆ ನೀಡಿ ಅವರ ಕಲೆಗೆ ಪ್ರೋತ್ಸಾಹ ನೀಡುವುದು ನಮ್ಮ ಮುಖ್ಯ ಗುರಿ ಇದಕ್ಕೂ ಮೊದಲು ಐಟಿ ಕ್ಷೇತ್ರದ ಚಿತ್ರ ಕಲಾವಿದರು, ಮಹಿಳಾ ಕಲಾವಿದರು, ವೈದ್ಯರ ಚಿತ್ರಕಲಾ ಪ್ರದರ್ಶನ ಏರ್ಪಡಿಸಿದ್ದೆವು.

–ರಜನಿ ರೇಖಾ, ರೀವ್ಸ್ ಸಂಸ್ಥೆಯ ಸಂಸ್ಥಾಪಕಿ

***

ಕರಿಯಪ್ಪ ಹಂಚಿನ ಮನಿ ಅವರ ಕಲಾಕೃತಿ

**

ಕಲಾಕೃತಿ

**

ಕಲಾಕೃತಿ

**

ಕಲಾಕೃತಿ

**

ಕಲಾಕೃತಿಯೊಂದಿಗೆ ಪೊಲೀಸ್

**

ಸಹೋದ್ಯೋಗಿಗಳ ಕಲಾಕೃತಿಗಳನ್ನು ಕುತೂಹಲದಿಂದ ವೀಕ್ಷಿಸುತ್ತಿರುವ ಅಧಿಕಾರಿಗಳು

**

ಚಿತ್ರಕಲಾವಿದೆ ಜಿ.ಎಸ್.ನೇತ್ರಾವತಿ (ಪೊಲೀಸ್), ಅವರ ತಾಯಿ ಹಾಗೂ ನಟ ‘ಸಂಚಾರಿ’ ವಿಜಯ್ ಅವರ ಜೊತೆ ನಟ ಯಶ್ ಸೆಲ್ಫಿ ಹಿಡಿದ ಕ್ಷಣ

**

ಪೊಲೀಸ್ ಚಿತ್ರಕಲಾವಿದರೊಂದಿಗೆ ನಟ ‘ಸಂಚಾರಿ’ ವಿಜಯ್ ಸೆಲ್ಫಿ

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !