ಪಾಕಿಸ್ತಾನದ ಚುನಾವಣೆಯಲ್ಲಿ 16 ಲಕ್ಷ ಮತಗಳು ತಿರಸ್ಕೃತ

7

ಪಾಕಿಸ್ತಾನದ ಚುನಾವಣೆಯಲ್ಲಿ 16 ಲಕ್ಷ ಮತಗಳು ತಿರಸ್ಕೃತ

Published:
Updated:

ಇಸ್ಲಾಮಾಬಾದ್ : ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಯಲ್ಲಿ ಚಲಾವಣೆಯಾದ ಮತಗಳ ಪೈಕಿ 16.7 ಲಕ್ಷ ಮತಗಳು ತಿರಸ್ಕೃತಗೊಂಡಿವೆ. ಈ ಪ್ರಮಾಣ ಶೇ 11.7ರಷ್ಟು ಎಂದು ಚುನಾವಣಾ ನಿಗಾ ಸಮಿತಿ ವರದಿ ತಿಳಿಸಿದೆ. 2013ರ ಚುನಾವಣೆಯಲ್ಲಿ 15 ಲಕ್ಷ ಮತಗಳು ತಿರಸ್ಕಾರವಾಗಿದ್ದವು.

ಯಾವ ಅಭ್ಯರ್ಥಿಗೆ ಮತ ಎಂದು ನಿರ್ದಿಷ್ಟವಾಗಿ ಗುರುತಿಸದಿರುವುದು ಹಾಗೂ ಒಬ್ಬರಿಗಿಂತ ಹೆಚ್ಚು ಜನರಿಗೆ ಚಲಾಯಿಸಿರುವ ಮತಗಳನ್ನು ಅಸಿಂಧುಗೊಳಿಸಲಾಗಿದೆ. 

10 ಕೋಟಿ ನೋಂದಾಯಿತ ಮತದಾರರ ಪೈಕಿ ಶೇ 51ರಷ್ಟು ಜನರ ಮಾತ್ರ ಈ ಬಾರಿ ಮತ ಚಲಾಯಿಸಿದ್ದರು. ರಾಜಧಾನಿ ಇಸ್ಲಾಮಾಬಾದ್ ವಲಯದಲ್ಲಿ (ಐಸಿಟಿ) ಕಳೆದ ಬಾರಿಗೆ ಹೋಲಿಸಿದರೆ ದುಪ್ಪಟ್ಟು ಮತಗಳು ತಿರಸ್ಕೃತವಾಗಿವೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 2

  Sad
 • 1

  Frustrated
 • 0

  Angry

Comments:

0 comments

Write the first review for this !