ಪರಶುರಾಮ ವಾಘ್ಮೋರೆ ದರ್ಗಾ ಜೈಲಿಗೆ

7

ಪರಶುರಾಮ ವಾಘ್ಮೋರೆ ದರ್ಗಾ ಜೈಲಿಗೆ

Published:
Updated:

ವಿಜಯಪುರ: ಪತ್ರಕರ್ತೆ ಗೌರಿ ಹತ್ಯೆ ಪ್ರಕರಣದಲ್ಲಿ ಎಸ್‌ಐಟಿ ಪೊಲೀಸರಿಂದ ಬಂಧಿಯಾಗಿದ್ದ ಪರಶುರಾಮ ವಾಘ್ಮೋರೆಯನ್ನು, ಸಿಂದಗಿ ಪಟ್ಟಣದಲ್ಲಿ ಪಾಕ್‌ ಧ್ವಜ ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಪುರದ ಒಂದನೇ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಲಯಕ್ಕೆ ಸೋಮವಾರ ವಿಚಾರಣೆಗಾಗಿ ಹಾಜರುಪಡಿಸಲಾಯಿತು.

ಈ ಸಂದರ್ಭ ನ್ಯಾಯಾಲಯದ ನ್ಯಾಯಾಧೀಶರಾದ ಗೀತಾ ಕೆ.ಬಿ. ಆರೋಪಿಯ ವಿಚಾರಣೆಯನ್ನು ಇದೇ 16ಕ್ಕೆ ಮುಂದೂಡಿ ಆದೇಶ ಹೊರಡಿಸಿದ್ದರಿಂದ, ಪೊಲೀಸರು ವಾಘ್ಮೋರೆಯನ್ನು ನಗರದ ದರ್ಗಾ ಜೈಲಿಗೆ ಕರೆದೊಯ್ದರು ಎಂಬುದು ಮೂಲಗಳಿಂದ ತಿಳಿದು ಬಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !