ರಾಮನಗರ ರೈತರ ಜತೆ ಸಂವಾದ

7
ಕನ್ನಡದಲ್ಲಿಯೇ ಕುಶಲೋಪರಿ ವಿಚಾರಿಸಿದ ಪ್ರಧಾನಿ

ರಾಮನಗರ ರೈತರ ಜತೆ ಸಂವಾದ

Published:
Updated:
ಮಾಗಡಿ ಚಂದೂರಾಯನಹಳ್ಳಿಯಲ್ಲಿರುವ ಕೃಷಿ ವಿಜ್ಞಾನ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ವಿಡಿಯೊ ಸಂವಾದದಲ್ಲಿ ಪಾಲ್ಗೊಂಡ ರೈತರು

ಮಾಗಡಿ (ರಾಮನಗರ): ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಬೆಳಿಗ್ಗೆ ‘ನಮೋ ಆ್ಯಪ್‌’ ಮೂಲಕ ದೇಶದ ವಿವಿಧ ಭಾಗಗಳ ರೈತರೊಂದಿಗೆ ಸಂವಾದ ನಡೆಸಿದರು.

ರಾಮನಗರ ಜಿಲ್ಲೆಯ ನಾಲ್ಕು ರೈತರಿಗೆ ಅವರ ಜತೆಗೆ ಮಾತನಾಡುವ ಅವಕಾಶ ದೊರೆಯಿತು. ಮೋದಿ ಈ ರೈತರೊಂದಿಗೆ ಕನ್ನಡದಲ್ಲೇ ಕುಶಲೋಪರಿ ವಿಚಾರಿಸಿದ್ದು ವಿಶೇಷವಾಗಿತ್ತು. ಇಲ್ಲಿನ ಚಂದೂರಾಯನಹಳ್ಳಿಯಲ್ಲಿರುವ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಮಾವೇಶಗೊಂಡ ರೈತರು ಸಂವಾದದಲ್ಲಿ ಪಾಲ್ಗೊಂಡರು. 10 ನಿಮಿಷ ಮಾತನಾಡಿದರು.

ಮೊದಲಿಗೆ ಮಾಗಡಿ ತಾಲ್ಲೂಕಿನ ಬೆಟ್ಟಹಳ್ಳಿ ಗ್ರಾಮದ ಜಯರಾಮಯ್ಯ ಮಾತನಾಡಿ, ಮಣ್ಣಿನ ಆರೋಗ್ಯ ಕಾರ್ಡ್‌ನಿಂದ ಆದ ಲಾಭದ ಕುರಿತು ವಿವರಿಸಿದರು. ನಂತರದಲ್ಲಿ ರಾಮನಗರ ತಾಲ್ಲೂಕಿನ ಮಾಯಗಾನಹಳ್ಳಿ ಗ್ರಾಮದ ಕಮಲಮ್ಮ ಮಾತು ಆರಂಭಿಸಿದರು.

ಕಮಲಮ್ಮ ಅವರು ಮಣ್ಣಿನ ಆರೋಗ್ಯ ಕಾರ್ಡಿನಿಂದ ಕೃಷಿಯಲ್ಲಾದ ಬದಲಾವಣೆ ಕುರಿತು ಪ್ರಧಾನಿಗೆ ಮನದಟ್ಟು ಮಾಡಿಕೊಟ್ಟರು.

ಮಾಗಡಿ ತಾಲ್ಲೂಕಿನ ನಾಗಶೆಟ್ಟಿಹಳ್ಳಿ ರೈತರಾದ ಜಯಶಂಕರ್ ಹಾಗೂ ಜ್ಞಾನಮೂರ್ತಿ ಅವರು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಿಂದ ಆದ ಅನುಕೂಲದ ಕುರಿತು ಪ್ರಧಾನಿಗೆ ವಿವರಿಸಿದರು.

ಆಗ ಮೋದಿ, ‘ನೀವು ಹೇಗಿದ್ದೀರಿ. ನಿಮ್ಮ ಕೃಷಿ ಕೆಲಸಗಳು ಹೇಗೆ ನಡೆದಿವೆ’ ಎಂದು ಜ್ಞಾನಮೂರ್ತಿ ಅವರನ್ನು ಕನ್ನಡದಲ್ಲೇ ಪ್ರಶ್ನಿಸಿದರು.

ಕೃಷಿ ವಿಜ್ಷಾನ ಕೇಂದ್ರದ ವಿಜ್ಞಾನಿಗಳು, ಕೃಷಿ ಇಲಾಖೆಯ ಅಧಿಕಾರಿಗಳು ಹಾಗೂ 97 ರೈತರು ಈ ಸಂವಾದದಲ್ಲಿ ಭಾಗಿಯಾಗಿದ್ದರು.

ಬರಹ ಇಷ್ಟವಾಯಿತೆ?

 • 4

  Happy
 • 2

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !