‘ಉಗ್ರರ ನಿಗ್ರಹಕ್ಕೆ ಪಾಕ್ ಕಟಿಬದ್ಧವಾಗಲಿ’

ಮಂಗಳವಾರ, ಮಾರ್ಚ್ 26, 2019
22 °C

‘ಉಗ್ರರ ನಿಗ್ರಹಕ್ಕೆ ಪಾಕ್ ಕಟಿಬದ್ಧವಾಗಲಿ’

Published:
Updated:

ವಾಷಿಂಗ್ಟನ್‌: ಭಯೋತ್ಪಾದಕ ಸಂಘಟನೆಗಳನ್ನು ನಾಶಗೊಳಿಸುವ ನಿಟ್ಟಿನಲ್ಲಿ ಪಾಕಿಸ್ತಾನ ಕಟಿಬದ್ಧವಾಗಬೇಕು ಎಂದು ಭಾರತ–ಅಮೆರಿಕ ಒತ್ತಾಯಿಸಿವೆ.

ಭಾರತದ ವಿದೇಶಾಂಗ ಕಾರ್ಯದರ್ಶಿ ವಿಜಯ್‌ ಗೋಖಲೆ ಸೋಮವಾರ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್‌ ಪಾಂಪಿಯೊ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಪಾಕಿಸ್ತಾನ ಭಯೋತ್ಪಾದನೆ ನಿಗ್ರಹಕ್ಕೆ ಕಠಿಣ ಕ್ರಮ ಕೈಗೊಂಡಿಲ್ಲ ಎಂಬ ಭಾರತದ ಆರೋಪಕ್ಕೆ ಅಮೆರಿಕ ಸಹಮತ ವ್ಯಕ್ತಪಡಿಸಿತು.ಪುಲ್ವಾಮಾ ದಾಳಿ ನಂತರ, ಭಾರತದ ವಿದೇಶಾಂಗ ನೀತಿ ಮತ್ತು ಭದ್ರತೆ ಸಂಬಂಧಿಸಿದ ವಿಷಯಗಳ ಬಗ್ಗೆ ಉಭಯ ನಾಯಕರು ಮಾತುಕತೆ ನಡೆಸಿದರು. 

ಇದರ ಜೊತೆಗೆ, ಭಾರತ–ಅಮೆರಿಕದ ದ್ವಿಪಕ್ಷೀಯ ಸಂಬಂಧದಲ್ಲಿ ಸಾಕಷ್ಟು ಸುಧಾರಣೆಯಾಗಿರುವ ಕುರಿತು ನಾಯಕರು ತೃಪ್ತಿ ವ್ಯಕ್ತಪಡಿಸಿದರು.  ಪುಲ್ವಾಮಾ ದಾಳಿ ನಂತರ, ಉಗ್ರ ನಿಗ್ರಹ ವಿಚಾರದಲ್ಲಿ ಅಮೆರಿಕವು ಭಾರತಕ್ಕೆ ಸಂಪೂರ್ಣ ಬೆಂಬಲ ನೀಡಿದೆ ಎಂದು ಗೋಖಲೆ ಪ್ರಶಂಸೆ ವ್ಯಕ್ತಪಡಿಸಿದರು. 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !