ಕನ್ನಡ ಸ್ನಾತಕೋತ್ತರ ವಿಭಾಗ ಮುಂದುವರಿಸಲು ಒತ್ತಾಯ

7
ಶಿಕಾರಿಪುರ: ಹಳೇ ವಿದ್ಯಾರ್ಥಿಗಳ ಸಂಘದಿಂದ ಪ್ರತಿಭಟನೆ

ಕನ್ನಡ ಸ್ನಾತಕೋತ್ತರ ವಿಭಾಗ ಮುಂದುವರಿಸಲು ಒತ್ತಾಯ

Published:
Updated:
ಶಿಕಾರಿಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿರುವ ಕನ್ನಡ ಸ್ನಾತಕೋತ್ತರ ವಿಭಾಗವನ್ನು ರದ್ದು ಮಾಡಬಾರದು ಎಂದು ಒತ್ತಾಯಿಸಿ ಮಂಗಳವಾರ ತಾಲ್ಲೂಕು ಕಚೇರಿ ಮುಂಭಾಗ ಹಳೇ ವಿದ್ಯಾರ್ಥಿಗಳ ಸಂಘದ ನೇತೃತ್ವದಲ್ಲಿ ವಿವಿಧ ಸಂಘಟನೆ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು

ಶಿಕಾರಿಪುರ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿರುವ ಅಲ್ಲಮ ಕನ್ನಡ ಸ್ನಾತಕೋತ್ತರ ಅಧ್ಯಯನ ವಿಭಾಗವನ್ನು ರದ್ದು ಮಾಡಬಾರದು. ವಿಭಾಗ ಸಂಯೋಜಕ ಡಾ.ಕುಂಸಿ ಉಮೇಶ್‌ ಅವರನ್ನು ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿ ಮಂಗಳವಾರ ತಾಲ್ಲೂಕು ಕಚೇರಿ ಮುಂಭಾಗ ಹಳೇ ವಿದ್ಯಾರ್ಥಿಗಳ ಸಂಘದ ನೇತೃತ್ವದಲ್ಲಿ ವಿವಿಧ ಸಂಘಟನೆ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.

ಹಳೇ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿ ದೊಡ್ಡಪ್ಪ ಮಾತನಾಡಿ, ‘ಸುತ್ತಮುತ್ತಲಿನ ತಾಲ್ಲೂಕಿನ ವಿದ್ಯಾರ್ಥಿಗಳಿಗೆ ಅನುಕೂಲವಾಗಿದ್ದ ಕನ್ನಡ ಸ್ನಾತಕೋತ್ತರ ವಿಭಾಗವನ್ನು ವಿಶ್ವವಿದ್ಯಾಲಯ ಮುಂದುವರಿಸಬೇಕು. ಸಂಯೋಜಕ ಡಾ.ಕುಂಸಿ ಉಮೇಶ್‌ ಅವರ ನಿರ್ಲಕ್ಷ್ಯದಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ’ ಎಂದು ಆರೋಪಿಸಿದರು.

ಅತಿಥಿ ಉಪನ್ಯಾಸಕ ಎನ್‌. ಸುರೇಶ್‌ ಮಾತನಾಡಿ, ‘ಕನ್ನಡ ಸ್ನಾತಕೋತ್ತರ ವಿಭಾಗವನ್ನು ರದ್ದು ಮಾಡಲು ವಿಭಾಗ ಸಂಯೋಜಕ ಕುಂಸಿ ಉಮೇಶ್‌ ಮಾಡಿದ ಕರ್ತವ್ಯ ಲೋಪ ಕಾರಣ. ಉಮೇಶ್‌ ಅವರನ್ನು ವರ್ಗಾವಣೆ ಮಾಡಬೇಕು. ವಿಭಾಗ ರದ್ದು ಆದೇಶವನ್ನು ಹಿಂಪಡೆಯಬೇಕು’ ಎಂದು ಒತ್ತಾಯಿಸಿದರು.

ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯಕ ಸಮಿತಿ ರಾಜ್ಯ ಘಟಕ ಅಧ್ಯಕ್ಷ ಸೋಮಶೇಖರ್‌ ಶಿಮೊಗ್ಗಿ, ಪದಾಧಿಕಾರಿಗಳಾದ ಅರುಣ್‌, ಬಿ.ಎನ್‌. ಸುನಿಲ್‌ಕುಮಾರ್‌, ಸಂದೀಪ್‌, ಎಚ್‌.ಪಿ. ಚೇತನ್‌, ಸುಮಾ, ದಾಕ್ಷಾಯಣಿ, ಹಳೇ ವಿದ್ಯಾರ್ಥಿಗಳಾದ ಸ.ನ. ಮಂಜಪ್ಪ, ಕಿರಣ್‌, ನಗರದ ರವಿಕಿರಣ್‌, ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ದಿವಾಕರ್‌, ಎಬಿವಿಪಿ ಜಿಲ್ಲಾ ಸಹ ಸಂಚಾಲಕ ಬೆಣ್ಣೆ ಪ್ರವೀಣ್‌, ವಿಶ್ವ ಹಿಂದೂ ಪರಿಷತ್‌ ಉಪಾಧ್ಯಕ್ಷ ಎಸ್‌.ಎಂ. ಪ್ರಕಾಶ್‌, ಆಮ್‌ ಆದ್ಮಿ ಪಾರ್ಟಿ ಮುಖಂಡರಾದ ಪ್ರಕಾಶ್‌ ಕೋನಾಪುರ, ಚಂದ್ರಕಾಂತ್‌ ರೇವಣಕರ್ ಉಪಸ್ಥಿತರಿದ್ದರು.

ತಹಶೀಲ್ದಾರ್‌ ಶೈಲಜಾ ಮೂಲಕ ಸರ್ಕಾರ ಹಾಗೂ ಕುವೆಂಪು ವಿಶ್ವವಿದ್ಯಾಲಯ ಕುಲಪತಿಗೆ ಮನವಿ ಸಲ್ಲಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !