ಪ್ರಬುದ್ಧರ ಗೋಷ್ಠಿ 13ಕ್ಕೆ; ತಾರಾ ಪ್ರಚಾರ ಇಂದು

ಮಂಗಳವಾರ, ಏಪ್ರಿಲ್ 23, 2019
25 °C

ಪ್ರಬುದ್ಧರ ಗೋಷ್ಠಿ 13ಕ್ಕೆ; ತಾರಾ ಪ್ರಚಾರ ಇಂದು

Published:
Updated:

ವಿಜಯಪುರ: ‘ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ವಿಜಯಪುರದಲ್ಲಿ ಇದೇ 13ರಂದು ಪ್ರಬುದ್ಧರ ಗೋಷ್ಠಿ ನಡೆಸಲಿದ್ದಾರೆ’ ಎಂದು ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಚಂದ್ರಶೇಖರ ಕವಟಗಿ ತಿಳಿಸಿದರು.

‘ಈ ಗೋಷ್ಠಿ ಪಕ್ಷಾತೀತ. ರಾಜಕೀಯಕ್ಕೂ ಇದಕ್ಕೂ ಸಂಬಂಧವಿಲ್ಲ. ವೈದ್ಯರು, ಎಂಜಿನಿಯರ್‌ಗಳು, ಶಿಕ್ಷಕ ಸಮೂಹ ಸೇರಿದಂತೆ ಪ್ರಜ್ಞಾವಂತರೊಟ್ಟಿಗೆ ಸಂತೋಷ್‌ ಸಂವಾದ ನಡೆಸಲಿದ್ದಾರೆ’ ಎಂದು ಬುಧವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಪಕ್ಷದ ಪದಾಧಿಕಾರಿಗಳು ಪ್ರಜ್ಞಾವಂತ ಸಮುದಾಯಕ್ಕೆ ಗೋಷ್ಠಿಯಲ್ಲಿ ಭಾಗಿಯಾಗುವಂತೆ ಆಹ್ವಾನ ನೀಡಲಿದ್ದಾರೆ. ಪ್ರಬುದ್ಧರು ಇದರಲ್ಲಿ ಭಾಗಿಯಾಗಲು ಮುಕ್ತ ಆಹ್ವಾನವಿದೆ’ ಎಂದು ಪ್ರಶ್ನೆಯೊಂದಕ್ಕೆ ಕವಟಗಿ ಉತ್ತರಿಸಿದರು.

‘ಚಲನಚಿತ್ರ ನಟಿ, ವಿಧಾನ ಪರಿಷತ್‌ನ ಮಾಜಿ ಸದಸ್ಯೆ ತಾರಾ ಗುರುವಾರ ವಿಜಯಪುರದಲ್ಲಿ ಜಿಗಜಿಣಗಿ ಪರ ಮಹಿಳಾ ಸಮಾವೇಶದಲ್ಲಿ ಮತ ಯಾಚಿಸಲಿದ್ದಾರೆ. ಇದರ ಬಳಿಕ ಇಂಡಿ, ಸಿಂದಗಿಯಲ್ಲಿ ರೋಡ್‌ ಶೋ ನಡೆಸಲಿದ್ದಾರೆ’ ಎಂದು ಕವಟಗಿ ಮಾಹಿತಿ ನೀಡಿದರು.

‘ಅಮಿತ್‌ ಶಾ, ಸ್ಮೃತಿ ಇರಾನಿ ಏ.18, 19ರಂದು ವಿಜಯಪುರಕ್ಕೆ ಭೇಟಿ ನೀಡುವ ಸಾಧ್ಯತೆಗಳಿದ್ದು, ರೋಡ್‌ ಶೋ ನಡೆಸಲಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಬಿಜೆಪಿ ಬಿಡುಗಡೆ ಮಾಡಿದ ಪ್ರಣಾಳಿಕೆ ಬಗ್ಗೆ ಎಲ್ಲೆಡೆ ಪ್ರಶಂಸೆಯ ಮಾತು ಕೇಳಿ ಬಂದಿವೆ. ಮೆಚ್ಚುಗೆ ವ್ಯಕ್ತವಾಗಿದೆ. ಚುನಾವಣೆಯನ್ನು ಗಂಭೀರವಾಗಿ ಸ್ಪರ್ಧಿಸಿದ್ದೇವೆ. ಎದುರಾಳಿ ವಿರುದ್ಧ ವಿಜಯಿಯಾಗುವುದೇ ನಮ್ಮ ಗುರಿಯಾಗಿದೆ’ ಎಂದು ಹೇಳಿದರು.

ಮುಖಂಡರಾದ ಭೀಮಾಶಂಕರ ಹದನೂರ, ಸಂಗಮೇಶ ಹೌದೆ, ಎಸ್‌ಸಿ ಮೋರ್ಚಾದ ಪದಾಧಿಕಾರಿ ಶಿವಶರಣ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !