ಸೋಮವಾರ, ಡಿಸೆಂಬರ್ 9, 2019
24 °C

ಬೇಡಿಕೆ ಈಡೇರಿಸಲು ಆಗ್ರಹಿಸಲು ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ವಿಜಯಪುರ: ರಾಜ್ಯ ಸರ್ಕಾರಿ ದಿನಗೂಲಿ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ದಿನಗೂಲಿ ಕಾಯಂಗೊಂಡ ಹಾಗೂ ಗುತ್ತಿಗೆ ನೌಕರರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಒಂದು ದಿನದ ಧರಣಿ ನಡೆಸಿ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಪಂಡಿತರಾವ ಪಾಟೀಲ ಮಾತನಾಡಿ, ರಾಜ್ಯ ಸರ್ಕಾರಿ ದಿನಗೂಲಿ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಡಿ.1 ರಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಆದರೂ ಈವರೆಗೆ ನಮ್ಮ ಒಂದೇ ಒಂದು ಬೇಡಿಕೆ ಈಡೇರಿಸಿಲ್ಲ. ನೌಕರರ ಹಿತದೃಷ್ಟಿಯಿಂದ ಕೂಡಲೇ ಮುಖ್ಯಮಂತ್ರಿಗಳು ನಮ್ಮ ಎಲ್ಲ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.

ಯು.ಎಸ್.ಹೇರಲಗಿ, ಜಗದೀಶ ಓಮೆ, ಎ.ಎಸ್.ಹಿಪ್ಪರಗಿ, ಐ.ಕೆ.ಕುಂಬಾರ, ಬಿ.ಕೆ.ಚೌಧರಿ, ಜಿ.ಸಿ.ಹಿರೇಮಠ, ಎಸ್.ಎಸ್.ಅಕ್ಕಿ, ಎಂ.ಎಸ್.ರೋಜೆ, ಭೀಮಶಿ ಸಿಂಧೆ, ಬೀಬಿ ಬಾಗವಾನ ಇದ್ದರು.

ಪ್ರತಿಕ್ರಿಯಿಸಿ (+)