ಚುನಾವಣೆಯಲ್ಲಿ ಇವಿಎಂ ಬಳಸದಂತೆ ಬಿಎಸ್‌ಪಿ ಒತ್ತಾಯ

ಶುಕ್ರವಾರ, ಜೂಲೈ 19, 2019
24 °C

ಚುನಾವಣೆಯಲ್ಲಿ ಇವಿಎಂ ಬಳಸದಂತೆ ಬಿಎಸ್‌ಪಿ ಒತ್ತಾಯ

Published:
Updated:
Prajavani

ಚಾಮರಾಜನಗರ: ಲೋಕಸಭಾ ಚುನಾವಣೆಯಲ್ಲಿ ವಿದ್ಯುನ್ಮಾನ ಮತ ಯಂತ್ರ (ಇವಿಎಂ) ಬಳಸದೆ ಮತಪತ್ರಗಳ ಮೂಲಕ ಚುನಾವಣೆ ನಡೆಸಬೇಕು ಎಂದು ಒತ್ತಾಯಿಸಿ ಬಹುಜನ ಸಮಾಜ ಪಕ್ಷ(ಬಿಎಸ್‌ಪಿ) ಶುಕ್ರವಾರ ಪ್ರತಿಭಟನೆ ನಡೆಸಿತು.

ನಗರದ ಚಾರಾಜೇಶ್ವರಸ್ವಾಮಿ ದೇವಸ್ಥಾನದಿಂದ ಮೆರವಣಿಗೆ ಆರಂಭಿಸಿದ ಕಾರ್ಯಕರ್ತರು ಭುವನೇಶ್ವರಿ ವೃತ್ತ ಬಿ.ರಾಚಯ್ಯ ಜೋಡಿರಸ್ತೆ ಮಾರ್ಗವಾಗಿ ಜಿಲ್ಲಾಡಳಿತ ಭವನದ ಮುಂಭಾಗ ಪ್ರತಿಭಟನೆ ನಡೆಸಿದರು. ಬಳಿಕ ಶಿರಸ್ತೇದಾರ ಕುಮಾರ್‌ ಅವರಿಗೆ ಮನವಿ ಸಲ್ಲಿಸಿದರು.

ಇವಿಎಂ ಮೂಲಕ ಮತದಾನ ಮಾಡಲು ಹಲವು ವರ್ಷಗಳಿಂದ ವಿರೋಧ ವ್ಯಕ್ತವಾಗುತ್ತಿದೆ. ಆದರೂ, ಈ ಮತಯಂತ್ರ ಬಳಕೆ ಮುಂದುವರಿದಿರುವುದು ಶೋಚನೀಯ. ಇದರ ಫಲವಾಗಿ 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟ ಅತ್ಯಂತ ಹೆಚ್ಚಿನ ಸ್ಥಾನ ಪಡೆದು ಅಧಿಕಾರಕ್ಕೆ ಬಂದಾಗ ಜನತೆ ಆಶ್ಚರ್ಯಕರ ರೀತಿಯಲ್ಲಿ ಒಪ್ಪಿಕೊಂಡರು. ಈ ಜಯದ ಹಿಂದೆ ಇವಿಎಂ ಹ್ಯಾಕ್‌ ಮಾಡಲಾಗಿದೆ ಎಂಬ ಆರೋಪ ಕೇಳಿಬಂತು.

ಈ ಆರೋಪಕ್ಕೆ ಪೂರಕವಾಗಿ ಅಮೆರಿಕದ ಸೈಬರ್‌ ಪಂಡಿತ ಸೈಯದ್‌ ಶುಜಾ ಅವರು ದಾಖಲೆ ಸಮೇತ ತಿಳಿಸುವುದಾಗಿ ಹೇಳಿದ್ದರು. ಅಲ್ಲದೆ, ಬಿಜೆಪಿ ಮುಖಂಡ ಗೋಪಿನಾಥ್‌ ಮುಂಡೆ ಅವರಿಗೆ ಮತಯಂತ್ರಗಳಿಗೆ ಕನ್ನ ಹಾಕುವ ಬಗ್ಗೆ ತಿಳಿದಿತ್ತು ಹೀಗಾಗಿ ಅವರನ್ನು ಕೊಲ್ಲಲಾಯಿತು ಎಂದು ಅವರು ಪತ್ರಿಕಾಗೋಷ್ಠಿಯೊಂದರಲ್ಲಿ ತಿಳಿಸಿದ್ದರು.

ಉತ್ತರ ಪ್ರದೇಶ, ಮಹಾರಾಷ್ಟ್ರ, ಗುಜರಾತ್‌ ರಾಜ್ಯಗಳಲ್ಲಿ ಮತಯಂತ್ರಗಳನ್ನು ತಿರುಚಲಾಗಿತ್ತು. ಇವಿಎಂ ಹ್ಯಾಕ್‌ ಮಾಡಲು ಕಡಿಮೆ ಪ್ರೀಕ್ವೆನ್ಸಿ ಸಿಗ್ನಲ್‌ ಅನ್ನು ರಿಲಯನ್ಸ್‌ ಜಿಯೋ ನೀಡಿದೆ ಎಂದು ಅವರು ಹೇಳಿದ್ದಾರೆ. ಟ್ರಾನ್ಸ್‌ಮಿಷನ್‌ ನಿಲ್ಲಿಸಿದ ಪರಿಣಾವಾಗಿ ದೆಹಲಿಯಲ್ಲಿ ಆಮ್‌ ಆದ್ಮಿ ಪಕ್ಷ (ಎಎಪಿ) ಗೆದ್ದಿತು. ಮದ್ಯಪ್ರದೇಶ, ಛತ್ತಿಸ್‌ಘಡ, ರಾಜಸ್ತಾನ ರಾಜ್ಯಗಳಲ್ಲಿ ಬಿಜೆಪಿ ಸೋಲಲು ಕಾರಣವಾಯಿತು ಎಂಬ ಮುಖ್ಯ ವಿಷಯಗಳನ್ನು ಅಂದು ತಿಳಿಸಿದ್ದರು ಎಂದರು.

ಆದ್ದರಿಂದ, ಮತದಾನವನ್ನೇ ಕಳ್ಳತನ ಮಾಡುವ ರಾಷ್ಟ್ರದ್ರೋಹದ ಕೆಲಸ ಮತ್ತೊಂದಿಲ್ಲ. ಇದರ ಮೇಲೆ ನಂಬಿಕೆ ಇಲ್ಲವಾಗಿದೆ. ಆದ್ದರಿಂದ 2019ರ ಲೋಕಸಭಾ ಚುನಾವಣೆಯಲ್ಲಿ ಇವಿಎಂ ಬಳಕೆ ಸ್ಥಗಿತಗೊಳಿಸಿ ಮತಯಂತ್ರಗಳಿಂದ ಚುನಾವಣೆ ನಡೆಸಬೇಕು ಎಂದು ಪಕ್ಷದ ಕಾರ್ಯಕರ್ತರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಬಿಎಸ್‌ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರಕಲವಾಡಿ ನಾಗೇಂದ್ರ, ತಾಲ್ಲೂಕು ಪಂಚಾಯಿತಿ ಸದಸ್ಯ ನಾಗರಾಜು, ಮುಖಂಡರಾದ ಆಲೂರು ಮಲ್ಲು, ಮಾದೇಶ ಉಪ್ಪಾರ್, ಬಸವಣ್ಣ ಪಾಲ್ಗೊಂಡಿದ್ದರು. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !