ಸವಿತಾ ಸಮಾಜದ ಪ್ರತಿಭಟನೆ

7

ಸವಿತಾ ಸಮಾಜದ ಪ್ರತಿಭಟನೆ

Published:
Updated:
Prajavani

ಬೆಂಗಳೂರು: ‘ಖಾಸಗಿ ವಾಹಿನಿಯಲ್ಲಿ ಸವಿತಾ ಸಮಾಜದ ಬಗ್ಗೆ ನಿಷೇಧಿತ ಪದ ಬಳಸಿ ಅವಹೇಳನ ಮಾಡಿದ್ದಾರೆ’ ಎಂದು ಆರೋಪಿಸಿ ಕೆ.ಆರ್.ಪುರದ ಸವಿತಾ ಸಮಾಜದ ವತಿಯಿಂದ ಪ್ರತಿಭಟನೆ ನಡೆಸಿದರು.

‘ಐಟಿ ಇಲಾಖೆಯ ನಿವೃತ್ತ ಜಂಟಿ ಆಯುಕ್ತ ಶ್ರೀಧರ್ ಎಂಬುವವರು ಖಾಸಗಿ ವಾಹಿನಿಯೊಂದರಲ್ಲಿ ಚರ್ಚೆಯಲ್ಲಿ ಭಾಗವಹಿಸಿದ್ದಾಗ ಸವಿತಾ ಸಮಾಜದ ವಿರುದ್ಧ ನಿಷೇಧಿತ
ಪದವನ್ನು ಬಳಸಿದ್ದಾರೆ. ಇದರಿಂದ ಸಮಾಜವನ್ನು ಕೆಟ್ಟ ರೀತಿಯಲ್ಲಿ ನೋಡುವ ಮತ್ತು ಕೀಳುಮಟ್ಟದಲ್ಲಿ ಕಾಣುವಂತಾಗಿದ್ದು ಇದರಿಂದ ಸಮಾಜದ ಎಲ್ಲರಿಗೂ ಅಗೌರವ ತೋರಿದಂತಾಗಿದೆ’ ಎಂದು ಪ್ರತಿಭಟನಕಾರರು ದೂರಿದರು.

ಸವಿತಾ ಸಮಾಜದ ರಾಜ್ಯಾಧ್ಯಕ್ಷ ಮಂಜುನಾಥ್, ಒಂದು ಧರ್ಮ, ಜಾತಿಯನ್ನಾಗಲಿ ಅವಹೇಳನ ಮಾಡುವ ಅಧಿಕಾರ ಯಾರಿಗೂ ಇಲ್ಲ. ಅಂತಹದ್ದರಲ್ಲಿ ಒಂದು ಜವಾಬ್ದಾರಿ ಸ್ಥಾನವನ್ನು ನಿಭಾಯಿಸಿದವರಿಗೆ ಇದರ ಅರಿವಿರಬೇಕು. ಅವಹೇಳನಕಾರಿಯಾಗಿ ಮಾತನಾಡಿರುವ ಶ್ರೀಧರ್ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !