ಮಂಗಳವಾರ, ಸೆಪ್ಟೆಂಬರ್ 17, 2019
21 °C
ಥಳಿತದ ಐದು ನಿಮಿಷದ ವಿಡಿಯೊ ಕ್ಲಿಪ್ಪಿಂಗ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವಿಕೆ

ಪತ್ರಕರ್ತನಿಗೆ ಸಾರ್ವಜನಿಕವಾಗಿ ಥಳಿತ..!

Published:
Updated:

ವಿಜಯಪುರ: ದೇವರಹಿಪ್ಪರಗಿಯ ಪತ್ರಕರ್ತ ಶಿವಾಜಿ ಮೆಟಗಾರ ಎಂಬಾತನಿಗೆ, ಸಾರ್ವಜನಿಕವಾಗಿ ಥಳಿಸಿದ ಐದು ನಿಮಿಷದ ವಿಡಿಯೊ ಕ್ಲಿಪ್ಪಿಂಗ್ ಈ ಭಾಗದ ಸಾಮಾಜಿಕ ಜಾಲತಾಣ ವಾಟ್ಸ್ಆ್ಯಪ್‌ನಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಈ ಘಟನೆ ಈಚೆಗಷ್ಟೇ ನಡೆದಿದ್ದು, ಥಳಿತದ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡಿದೆ. 

ಎಂಎಸ್‌ಐಎಲ್‌ ಮಳಿಗೆ ಮಂಜೂರಾತಿಗೆ ಸಂಬಂಧಿಸಿದಂತೆ ನಾಗಠಾಣ ಶಾಸಕ ದೇವಾನಂದ ಚವ್ಹಾಣ ಜತೆ ದೇವರಹಿಪ್ಪರಗಿಯ ಪತ್ರಕರ್ತ ಶಿವಾಜಿ ಮೆಟಗಾರ ಮೊಬೈಲ್‌ನಲ್ಲಿ ಮಾತನಾಡಿದ್ದಾರೆ. ಇದನ್ನು ರೆಕಾರ್ಡ್‌ ಮಾಡಿಕೊಂಡಿದ್ದಾರೆ. ಈ ಆಡಿಯೊ ರೆಕಾರ್ಡ್‌ನ್ನು ದೇವರಹಿಪ್ಪರಗಿಯ ಬಿಜೆಪಿ ಮುಖಂಡ ಕಾಶೀನಾಥ ಮಸಬಿನಾಳ ಅಭಿಮಾನಿಗಳ ಬಳಗಕ್ಕೆ ಶಿವಾಜಿ ಅಪ್‌ಲೋಡ್‌ ಮಾಡಿದ್ದಾರೆ ಎನ್ನಲಾಗಿದೆ.

ಇದು ಗ್ರೂಪ್‌ನಿಂದ ಫಾರ್ವರ್ಡ್‌ ಆಗಿದೆ. ತಮಗೆ ಮಂಜೂರಾಗಬೇಕಿದ್ದ ಎಂಎಸ್‌ಐಎಲ್‌ ಮಳಿಗೆಗೆ ಶಿವಾಜಿ, ನೆರೆಯ ಕ್ಷೇತ್ರದ ಶಾಸಕರ ಮೂಲಕ ಅಡ್ಡಗಾಲಾಗುತ್ತಿದ್ದಾನೆ ಎಂದು ಭಾವಿಸಿದ ಬಿಜೆಪಿಯ ಯುವ ಧುರೀಣ ರಾಜೀವ ಮೆಟಗಾರ ಬೆಂಬಲಿಗರು, ಶಿವಾಜಿಯನ್ನು ಹಿಡಿದು ಸಾರ್ವಜನಿಕವಾಗಿ ಥಳಿಸಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಪೊಲೀಸರ ಮಧ್ಯಪ್ರವೇಶದ ಬಳಿಕ ಸಾರ್ವಜನಿಕವಾಗಿ ಥಳಿಸುವುದು ನಿಂತಿದೆ. ಇದನ್ನು ವಿಡಿಯೊ ಚಿತ್ರೀಕರಿಸಿದ್ದು, ಈ ಕ್ಲಿಪ್ಪಿಂಗ್ ಇದೀಗ ಎಲ್ಲೆಡೆ ಹರಿದಾಡುತ್ತಿದೆ.

ಘಟನೆಗೆ ಸಂಬಂಧಿಸಿದಂತೆ ಶಿವಾಜಿ ಮೆಟಗಾರ ಹಾಗೂ ರಾಜೀವ ಮೆಟಗಾರ ಪರಸ್ಪರ ದೇವರಹಿಪ್ಪರಗಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದರು.

Post Comments (+)