‘ವಿರಳ ಕಾಯಿಲೆಗಳ ಅರಿವು ಅಗತ್ಯ’

7

‘ವಿರಳ ಕಾಯಿಲೆಗಳ ಅರಿವು ಅಗತ್ಯ’

Published:
Updated:

ಬೆಂಗಳೂರು: ‘ವಿರಳ ಕಾಯಿಲೆಗಳ ಕುರಿತು ಜನರಲ್ಲಿ ಅರಿವು ಇಲ್ಲ. ತಡವಾಗಿ ಚಿಕಿತ್ಸೆ ದೊರೆತರೆ ಇಂತಹ ರೋಗಿಗಳು ಬದುಕುಳಿಯುವ ಸಾಧ್ಯತೆ ಕಡಿಮೆ’ ಎಂದು ವಾಣಿವಿಲಾಸ ಆಸ್ಪತ್ರೆಯ ಶಿಶು ಆರೈಕೆ ವಿಭಾಗದ ಮುಖ್ಯಸ್ಥರಾದ ಸರಳಾ ಸಭಾಪತಿ ಹೇಳಿದರು.

ಪ್ರಧಾನಮಂತ್ರಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಶನಿವಾರ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿದರು.

‘ಮಕ್ಕಳಲ್ಲಿ ಹೆಚ್ಚಾಗಿ ಕಂಡಬರುವ ಎಂಪಿಎಸ್‌, ಗೌಷರ್‌, ಪೊಂಪೆ, ಫ್ಯಾಬ್ರಿ ಇತ್ಯಾದಿ ಕಾಯಿಲೆಗಳ ಕುರಿತು ಮೊದಲೇ ಅರಿವು ಇದ್ದರೆ ಆರಂಭಿಕ ಹಂತದಲ್ಲಿ ಚಿಕಿತ್ಸೆ ನೀಡಬಹುದು. ಉಲ್ಬಣಿಸಿದರೆ ಶಾಶ್ವತವಾಗಿ ಅಂಗವೈಕಲ್ಯಕ್ಕೆ ಒಳಗಾಗಬೇಕಾಗುತ್ತದೆ. ಈ ರೋಗಗಳ ಚಿಕಿತ್ಸೆಗೆ ಒಬ್ಬ ವ್ಯಕ್ತಿಗೆ ₹30 ಲಕ್ಷದ ವರೆಗೆ ಖರ್ಚಾಗುತ್ತದೆ. ಜುಲೈ ತಿಂಗಳಲ್ಲಿ ಸರ್ಕಾರ 8 ವೈದ್ಯರ ಸಮಿತಿಯನ್ನು ರಚಿಸಿ 20 ರೋಗಿಗಳ ಹೆಸರನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ರಾಜ್ಯ ಸರ್ಕಾರ ಕೂಡ ಸಹಾಯ ಮಾಡಿದರೆ ಈ ರೋಗಿಗಳಿಗೆ ಪರಿಪೂರ್ಣ ಚಿಕಿತ್ಸೆ ಸಿಗಲಿದೆ’ ಎಂದು ಅವರು ಹೇಳಿದರು.

 

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !