ಜಿಮ್‌ ಪುನರಾರಂಭ

7

ಜಿಮ್‌ ಪುನರಾರಂಭ

Published:
Updated:
Deccan Herald

ವಿಜಯಪುರ: ನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿನ ವ್ಯಾಯಾಮ ಶಾಲೆಯನ್ನು (ಜಿಮ್‌) ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ.ಮನಗೂಳಿ ಗುರುವಾರ ಉದ್ಘಾಟಿಸಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಡಿ ನಡೆಯುತ್ತಿದ್ದ ಜಿಮ್‌ ಕಾರಣಾಂತರಗಳಿಂದ ಕೆಲ ತಿಂಗಳಿಂದ ಸ್ಥಗಿತಗೊಂಡಿತ್ತು. ಇದರಿಂದ ನಿತ್ಯ ಬೆಳಿಗ್ಗೆ ಮತ್ತು ಸಂಜೆ ಕಸರತ್ತು ನಡೆಸುವ ವಿದ್ಯಾರ್ಥಿಗಳಿಗೆ ಹಾಗೂ ಯುವಕರಿಗೆ ತುಂಬಾ ತೊಂದರೆಯಾಗಿತ್ತು.

ಈ ಕುರಿತಂತೆ ‘ಪ್ರಜಾವಾಣಿ’ ಅ.22ರಂದು ನಗರ ಸಂಚಾರ ಅಂಕಣದಲ್ಲಿ ವಿಶೇಷ ವರದಿ ಪ್ರಕಟಿಸಿತ್ತು. ನಿರೀಕ್ಷೆಯಂತೆ ಇದೀಗ ಜಿಮ್‌ ಉದ್ಘಾಟನೆಗೊಂಡಿದೆ.

ಅಥ್ಲೆಟಿಕ್ಸ್‌ಗಳಿಗೆ ಉಚಿತ ಪ್ರವೇಶ. ವಿದ್ಯಾರ್ಥಿಗಳಿಗೆ ಮೂರು ತಿಂಗಳಿಗೆ ₹ 90, ಇತರರಿಗೆ ತಿಂಗಳಿಗೆ ₹ 170 ಪ್ರವೇಶ ಮೊತ್ತ ನಿಗದಿಪಡಿಸಲಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಎಸ್‌.ಜಿ.ಲೋಣಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !