ಅಂಗವಿಕಲರ ನೆರವಿಗಾಗಿ ‘ಬಿಡಿಡಿ ಎಸಿಸ್ಟ್‌’ ಸಾಧನ

7

ಅಂಗವಿಕಲರ ನೆರವಿಗಾಗಿ ‘ಬಿಡಿಡಿ ಎಸಿಸ್ಟ್‌’ ಸಾಧನ

Published:
Updated:

ಬೆಂಗಳೂರು: ಅಂಧ, ಶ್ರವಣದೋಷವುಳ್ಳ ಮತ್ತು ಮಾತುಬಾರದವರ ಅನುಕೂಲಕ್ಕಾಗಿ ದ್ವಿತೀಯ ಪಿಯುಸಿ ವಿದ್ಯಾರ್ಥಿ ಎಚ್‌.ಎಂ.ರೋಚನ ‘ಬ್ಲೈಂಡ್‌ ಡೆಫ್‌ ಡಂಬ್‌( ಬಿಡಿಡಿ) ಎಸಿಸ್ಟ್‌’ ಎಂಬ ಸಂವಹನ ಸಾಧನವೊಂದನ್ನು ಆವಿಷ್ಕರಿಸಿದ್ದಾರೆ. 

ನಗರದಲ್ಲಿ ಬುಧವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಂಗವಿಕಲರು ಸಂವಹನ ನಡೆಸುವಲ್ಲಿ ಎದುರಾಗುವ ಸಮಸ್ಯೆಗಳನ್ನು ಮನಗಂಡು ಅವರ ನೆರವಿಗೆಂದೆ ಕಡಿಮೆ ವೆಚ್ಚದಲ್ಲಿ ಈ ಸಾಧನವನ್ನು ಸಿದ್ಧಪಡಿಸಿದ್ದೇನೆ’ ಎಂದರು.

‘ಭಾಷಾಂತರಕಾರರ ಅವಲಂಬನೆಯಿಲ್ಲದೆ ಸ್ವತಂತ್ರವಾಗಿ ಮಾತನಾಡಲು ಈ ಸಾಧನ ನೆರವಾಗಲಿದೆ. ಇದರಲ್ಲಿ ಟೈಪಿಂಗ್‌, ರೈಟಿಂಗ್‌, ಬ್ರೈಲ್‌ ಕೀಬೋರ್ಡ್‌, ಧ್ವನಿ ಗುರುತಿಸುವ, ಸಂಕೇತ ಭಾಷೆ... ಇತ್ಯಾದಿ ತಂತ್ರಾಂಶಗಳನ್ನು ಅಳವಡಿಸಲಾಗಿದೆ’ ಎಂದು ವಿವರಿಸಿದರು.

‘ಈಗಾಗಲೇ ಮಾರುಕಟ್ಟೆಯಲ್ಲಿರುವ ಇಂತಹ ಸಾಧನೆಗಳಿಗೆ ಅಂದಾಜು ₹10,000 ದರವಿದೆ. ಆದರೆ, ಈ ಸಾಧನ ಅತ್ಯಾಧುನಿಕ ತಂತ್ರಾಂಶವನ್ನು ಹೊಂದಿದ್ದು, ₹6,000 ದಲ್ಲಿ ದೊರೆಯಲಿದೆ. ಸುಮಾರು ಎರಡು ತಿಂಗಳ ನಿರಂತರ ಪರಿಶ್ರಮದಿಂದ ಈ ಸಾಧನವನ್ನು ಕಂಡುಹಿಡಿಯಲಾಗಿದೆ’ ಎಂದರು.  

‘ಈ ಉಪಕರಣದ ನೆರವಿನಿಂದ ಟೆಕ್ಸ್ಟ್‌ ಅನ್ನು ಇಂಗ್ಲಿಷ್‌ನಿಂದ ಬೆಂಗಾಲಿ, ಗುಜರಾತಿ, ಹಿಂದಿ, ಕನ್ನಡ, ಮಲಯಾಳಿ, ಮರಾಠಿ, ತಮಿಳು, ತೆಲುಗು ಸೇರಿದಂತೆ ಮತ್ತಿತರ ಭಾಷೆಗಳಿಗೆ ಸುಲಭವಾಗಿ ಅನುವಾದಿಸಬಹುದು. ರೇಡಿಯೊ, ಯೂಟ್ಯೂಬ್‌, ಗೂಗಲ್‌ ಪ್ಲೇ ಮ್ಯೂಸಿಕ್‌, ಗಾನಾ, ಫೀಡ್‌ ಸ್ಟ್ರೀಮಿಂಗ್‌, ರೆಸಿಪಿ ಸರ್ಚಿಂಗ್‌ ಸೇರಿದಂತೆ ವಿವಿಧ ಆ್ಯಪ್‌ ಸೇವೆಗಳು ಲಭ್ಯವಿವೆ’ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !