‘ಸಹಬಾಳ್ವೆ’ಯ 3ನೇ ವಾರ್ಷಿಕೋತ್ಸವ

7

‘ಸಹಬಾಳ್ವೆ’ಯ 3ನೇ ವಾರ್ಷಿಕೋತ್ಸವ

Published:
Updated:
Deccan Herald

ಬೆಂಗಳೂರು: ಮೌಲ್ಯಾಧಾರಿತ ಶಿಕ್ಷಣ ನೀಡುವ ಮತ್ತು ಸೌಲಭ್ಯಗಳಿಂದ ವಂಚಿತರಿಗೆ ಸಾಂತ್ವನ ಹೇಳುವ ‘ಸಹಬಾಳ್ವೆ’ ಸಂಸ್ಥೆಯ ಮೂರನೆ ವಾರ್ಷಿಕೋತ್ಸವ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆಯಿತು.

ಸಂಸ್ಥೆಯ ಸ್ಥಾಪಕ ಡಾ.ರಾಘವೇಂದ್ರ, ‘ಸಂಸ್ಥೆಯು ಬೀದರ್‌ ಮತ್ತು ಮೈಸೂರು ಜಿಲ್ಲೆಯ ಹಲವಾರು ಗ್ರಾಮಗಳ ಮಕ್ಕಳಲ್ಲಿ ಮೌಲ್ಯಗಳನ್ನು ಬೆಳೆಸಲು ಚಟುವಟಿಕೆಗಳನ್ನು ಹಮ್ಮಿಕೊಂಡಿದೆ. ಇದರಿಂದ ಮಕ್ಕಳ ಮನಸ್ಸು ವಿಕಸನಗೊಂಡು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸುತ್ತಿದ್ದಾರೆ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಟಿ.ಎಸ್‌.ಗೋಪಾಲ ಅವರ ಪುಸ್ತಕ ಬಿಡುಗಡೆ ಮಾಡಲಾಯಿತು. ಕಲಬುರ್ಗಿಯ ಶಿವಶರಣಪ್ಪ ಗೋಗಿ ಅವರಿಗೆ ‘ಸಮರ್ಥ ಸೇವಾ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿದುಷಿ ದೀಪರಾವ್‌, ವಾದ್ಯಗಾರರಾದ ಸನತ್‌ ಕುಮಾರ್‌, ಕಾರ್ತಿಕ್‌ ಪ್ರಣವ್‌ ಸಂಗೀತ ಕಚೇರಿ ನಡೆಸಿಕೊಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !