ಸಂಕ್ರಾಂತಿ: 500 ಹೆಚ್ಚುವರಿ ಬಸ್‌

7

ಸಂಕ್ರಾಂತಿ: 500 ಹೆಚ್ಚುವರಿ ಬಸ್‌

Published:
Updated:

ಬೆಂಗಳೂರು: ಸಂಕ್ರಾಂತಿ ಪ್ರಯುಕ್ತ ಕೆಎಸ್‌ಆರ್‌ಟಿಸಿ ಹೆಚ್ಚುವರಿಯಾಗಿ 500 ಬಸ್‌ಗಳ ವ್ಯವಸ್ಥೆ ಮಾಡಿದೆ. ಜ. 12 ಈ ಬಸ್‌ಗಳು ರಾಜ್ಯದ ವಿವಿಧ ಸ್ಥಳಗಳಿಗೆ ತೆರಳಲಿವೆ. 15ರಂದು ಕೂಡಾ ರಾಜ್ಯ ಮತ್ತು ಅಂತರರಾಜ್ಯಗಳಿಗೆ ಬಸ್‌ಗಳು ಓಡಾಡಲಿವೆ.  

ಶಾಂತಿನಗರದಲ್ಲಿನ ಬೆಂಗಳೂರು ಕೇಂದ್ರ ಘಟಕ-4 ಮತ್ತು ಘಟಕ-2ರಿಂದ ಮಧುರೆ, ಕುಂಭಕೋಣಂ, ತಿರುಚ್ಚಿ, ಚೆನ್ನೈ, ಕೊಯಮತ್ತೂರ್, ತಿರುಪತಿ, ವಿಜಯವಾಡ, ಹೈದರಾಬಾದ್‌ಗೆ ಹವಾನಿಯಂತ್ರಿತ ಸಾರಿಗೆ ಬಸ್‌ಗಳು ಸಂಚರಿಸಲಿವೆ.

ಬಸವೇಶ್ವರ ಬಸ್‌ ನಿಲ್ದಾಣ, ವಿಜಯನಗರ, ಜಯನಗರ ನಾಲ್ಕನೇ ಬ್ಲಾಕ್‌ನಿಂದ ಪ್ರಯಾಣಿಕರ ಒತ್ತಡಕ್ಕನುಗುಣವಾಗಿ ಶಿವಮೊಗ್ಗ, ದಾವಣಗೆರೆ, ಹುಬ್ಬಳ್ಳಿ, ವಿಜಯಪುರ, ಕಲಬುರ್ಗಿ, ತಿರುಪತಿ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ ಮುಂತಾದ ಮಾರ್ಗಗಳಿಗೆ ಹೆಚ್ಚುವರಿ ಬಸ್‌ ವ್ಯವಸ್ಥೆ ಕಲ್ಪಿಸಲಾಗಿದೆ.

ಜಿಲ್ಲಾ ಹಾಗೂ ಪ್ರಮುಖ ತಾಲ್ಲೂಕು ಕೇಂದ್ರಗಳಿಂದಲೂ ವಿಶೇಷ ಬಸ್‌ಗಳು ಸಂಚರಿಸಲಿವೆ. ಮುಂಗಡ ಬುಕ್ಕಿಂಗ್‌, ಪ್ರಯಾಣ ದರ ವಿವರ, ಪಿಕ್‌ ಅಪ್‌ ಪಾಯಿಂಟ್‌, ಹೊರ ರಾಜ್ಯಗಳ ಬುಕ್ಕಿಂಗ್‌ ಕೌಂಟರ್‌, ಪಿಕ್‌ ಅಪ್‌ ಮಾಹಿತಿಗೆ ನಿಗಮದ ವೆಬ್‌ಸೈಟ್‌ www.ksrtc.in ನೋಡಬಹುದು.

ನಾಲ್ಕು ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಏಕಕಾಲದಲ್ಲಿ ಟಿಕೆಟ್‌ ಬುಕ್‌ ಮಾಡಿದರೆ ಶೇ 5ರಷ್ಟು, ಹೋಗಿ ಬರುವ ಟಿಕೆಟ್‌ನ್ನು ಒಟ್ಟಿಗೆ ಕಾಯ್ದಿರಿಸಿದಲ್ಲಿ ಒಟ್ಟಾ ರೆ ಪ್ರಯಾಣ ದರದ ಶೇ 10ರಷ್ಟು ರಿಯಾಯಿತಿ ಪಡೆಯಬಹುದು ಎಂದು ನಿಗಮದ ಪ್ರಕಟಣೆತಿಳಿಸಿದೆ. 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !