ಸತೀಶ ಕೆದ್ಲಾಯಗೆ ‘ಸಾರ್ಥಕ–ಸಾಧಕ’ ಪ್ರಶಸ್ತಿ

6

ಸತೀಶ ಕೆದ್ಲಾಯಗೆ ‘ಸಾರ್ಥಕ–ಸಾಧಕ’ ಪ್ರಶಸ್ತಿ

Published:
Updated:
Deccan Herald

ಬೆಂಗಳೂರು: ಮರಣೋತ್ತರವಾಗಿ ಹಾರ್ಯಾಡಿ ಸತೀಶ ಕೆದ್ಲಾಯ ಅವರಿಗೆ ಯಕ್ಷ ಸಿಂಚನ ಟ್ರಸ್ಟ್‌ ‘ಸಾರ್ಥಕ–ಸಾಧಕ’ ಪ್ರಶಸ್ತಿ ನೀಡಿ ಗೌರವಿಸಲಿದೆ.

ಯಕ್ಷಗಾನ ಕಲಾವಿದರಿಗೆ ಪ್ರತಿವರ್ಷ ಈ ಪ್ರಶಸ್ತಿ ನೀಡಲಾಗುತ್ತದೆ. ಸತೀಶ ಕೆದ್ಲಾಯ ಅವರು 20 ವರ್ಷ ಯಕ್ಷಗಾನ ಕಲಾವಿದರಾಗಿ ಸೇವೆ ಸಲ್ಲಿಸಿದ್ದಾರೆ. ಸೆಪ್ಟೆಂಬರ್‌ 2 ರಂದು ಸಂಸ್ಥೆಯ 9ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪ್ರಶಸ್ತಿ ನೀಡುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.

ಇದೇ ದಿನ ಮಧ್ಯಾಹ್ನ 3.30ಕ್ಕೆ ಬಡಗುತಿಟ್ಟು ಪೌರಾಣಿಕ ಯಕ್ಷೋತ್ಸವವನ್ನು ಆಯೋಜಿಸಲಾಗಿದೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !