ಕೊಳ್ಳೇಗಾಲ: ಸುತ್ತಲೂ ಹಸಿರು ಬೆಟ್ಟಗುಡ್ಡಗಳಿಂದ ಆವೃತ್ತವಾದ ಈ ಶಾಲೆ ಒಂದು ಕ್ಷಣ ಗುರುಕುಲವನ್ನು ನೆನಪಿಸುತ್ತದೆ. ನಗರದ ಯಾವುದೇ ಜಂಜಾಟವಿಲ್ಲದೆ ವಿದ್ಯಾರ್ಥಿಗಳು ಆಟ ಪಾಠದಲ್ಲಿ ಮಗ್ನರಾಗುವುದನ್ನು ಕಂಡಾಗ, ನಾವು ಕೂಡ ಇಲ್ಲಿ ವ್ಯಾಸಂಗ ಮಾಡಬೇಕಿತ್ತು ಎಂದು ಯಾರಿಗಾದರೂ ಅನ್ನಿಸದೇ ಇರದು.

ಅಂದ ಹಾಗೆ, ಈಗ ಹೇಳ ಹೊರಟಿರುವುದುತಿಮ್ಮರಾಜೀಪುರ ಗ್ರಾಮದ ಹೊರವಲಯದಲ್ಲಿರರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಬಗ್ಗೆ. ಯಾವುದೇ ಖಾಸಗಿ ಶಾಲೆಗಳಿಗಿಂತಲೂ ಕಡಿಮೆ ಇಲ್ಲ ಈ ವಸತಿ ಶಾಲೆ.

10 ಎಕರೆ ವಿಸ್ತೀರ್ಣದಲ್ಲಿ ಹರಡಿಕೊಂಡಿರುವ ಈ ಶಾಲೆಯಲ್ಲಿ 244 ಹೆಣ್ಣು ಮಕ್ಕಳುವಿದ್ಯಾಭ್ಯಾಸ ಮಾಡುತ್ತಿದ್ದಾರೆ. 10 ಮಂದಿ ನುರಿತ ಶಿಕ್ಷಕರು ಅವರಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಶಾಲೆಗೆ ಅಗತ್ಯವಾದ ಎಲ್ಲ ಸೌಲಭ್ಯಗಳೂ ಇಲ್ಲಿವೆ.

ಸುಂದರ ಕೈತೋಟ: ಹಚ್ಚ ಹಸಿರಿನಿಂದ ಕೂಡಿರುವ ಸುಂದರ ಕೈ ತೋಟ ಇಲ್ಲಿನ ಪ್ರಮುಖ ಆಕರ್ಷಣೆ. ಗುಲಾಬಿ ತೋಟ, ಬಾಳೆ ತೋಟ ಹಾಗೂ ಮಿಶ್ರ ತೋಟಗಳಲ್ಲಿ ಬೆಳೆಗಳನ್ನು ಯಾವುದೇ ರಾಸಾಯನಿಕ ಬಳಸದೆ ಆರೈಕೆ ಮಾಡುತ್ತಿದ್ದಾರೆ.ತೆಂಗು, ತೇಗ, ಮಾವು, ಹಲಸು, ಬಾದಾಮಿ, ನೇರಳೆ, ಸೀಬೆ, ಪರಂಗಿ, ನೆಲ್ಲಿಕಾಯಿ, ದಾಳಿಂಬೆ, ಸಪೋಟಾ, ಬಾಳೆಹಣ್ಣುಗಳನ್ನು ಮಿಶ್ರ ತೋಟದಲ್ಲಿ ಬೆಳೆಯುತ್ತಾರೆ. ವಿವಿಧ ಸೂಪ್ಪು ಹಾಗೂ ನುಗ್ಗೆ, ಕೊತ್ತಂಬರಿ, ಪುದೀನ, ಮೆಂತೆ, ಮೂಲಂಗಿ, ಮೆಣಸಿನಕಾಯಿ, ಟೊಮೆಟೊ, ಬದನೆಕಾಯಿ ಸೇರಿದಂತೆ ಅನೇಕ ತರಕಾರಿಗಳನ್ನು ಬೆಳೆಸಿ ಅಡುಗೆಗೆ ಬಳಸುತ್ತಾರೆ.

ಆರ್ಯುವೇದ ಗಿಡ: ನೆಲ ಬಸಳೆ, ಅಮೃತಬಳ್ಳಿ, ಕಾಮಕಸ್ತೂರಿ, ಒಂದೆಲಗ, ತುಳಸಿ, ಲೋಳೆಸರ ಸೇರಿದಂತೆ ಅನೇಕ ಗಿಡಮೂಲಿಕೆಗಳೂ ಇಲ್ಲಿವೆ. ಈ ಗಿಡಗಳಲ್ಲಿರುವ ಔಷಧೀಯ ಗುಣಗಳ ಬಗ್ಗೆ ವಿಜ್ಞಾನ ಶಿಕ್ಷಕರು ಮಕ್ಕಳಿಗೆ ವಿವರಣೆ ನೀಡುತ್ತಾರೆ.

ಹೈಟೆಕ್ ತರಗತಿ: ಮಕ್ಕಳಿಗೆ ಸುಸಜ್ಜಿತವಾದ 10 ಕೊಠಡಿಗಳು ಇವೆ. ಕಂಪ್ಯೂಟರ್ ಕೂಠಡಿ, ವಿಜ್ಞಾನ ಪ್ರಯೋಗಾಲಯ, ಗ್ರಂಥಾಲಯ, ಉತ್ತಮವಾದ ಆಟದ ಮೈದಾನ, ಜಿಮ್ ಕೂಠಡಿ, ಕ್ರೀಡಾ ಕೂಠಡಿ ಸೇರಿದಂತೆ ಎಲ್ಲ ಸೌಲಭ್ಯಗಳಿವೆ.

ಬಯೊಮೆಟ್ರಿಕ್ ಹಾಜರಾತಿ ವ್ಯವಸ್ಥೆ

ಶಾಲೆಯಲ್ಲಿ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಬಯೊಮೆಟ್ರಿಕ್ ಹಾಜರಾತಿ ವ್ಯವಸ್ಥೆ ಅಳವಡಿಸಿಕೊಳ್ಳಲಾಗಿದೆ.ವರ್ಷಕ್ಕೆ ಒಮ್ಮೆ ಮಕ್ಕಳಿಗೆ ಶೈಕ್ಷಣಿಕವಾಗಿ ಶಾಲಾ ಪ್ರವಾಸವನ್ನು ಹಮ್ಮಿಕೊಳ್ಳಲಾಗುತ್ತದೆ.ಎಸ್ಸೆಸ್ಸೆಲ್ಸಿಯಲ್ಲಿ 3 ಬಾರಿ ಶೇಕಡ 100ರಷ್ಟು ಫಲಿತಾಂಶವನ್ನು ಈ ಶಾಲೆ ಸಾಧಿಸಿದೆ.

ಅನೇಕ ಪ್ರಶಸ್ತಿ: ಕಳೆದ ವರ್ಷ ಪ್ರತಿಭಾ ಕಾರಂಜಿಯಲ್ಲಿ ಸ್ಪರ್ಧೆ ಮಾಡಿ ಇಲ್ಲಿನ ಮಕ್ಕಳು ಪ್ರಥಮ ಸ್ಥಾನ ಪಡೆದು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ. ಜಿಲ್ಲಾ ಮಟ್ಟದ ಕಬಡ್ಡಿಯಲ್ಲಿ ಪ್ರಥಮ ಸ್ಥಾನಗಳಿಸಿದ್ದಾರೆ. ಇಲ್ಲಿನ ಮಕ್ಕಳು ಚಿತ್ರಕಲೆ ಸ್ಪರ್ಧೆ, ಆಶುಭಾಷಣ ಸ್ಪರ್ಧೆ, ಪ್ರಬಂಧ ಸ್ಪರ್ಧೆ ಸೇರಿದಂತೆ ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.