‘ಮೂಲ ಕಾಶ್ಮೀರಿಗರ ಭಾವನೆ ಅರ್ಥೈಸಿಕೊಳ್ಳಬೇಕಿದೆ’

7

‘ಮೂಲ ಕಾಶ್ಮೀರಿಗರ ಭಾವನೆ ಅರ್ಥೈಸಿಕೊಳ್ಳಬೇಕಿದೆ’

Published:
Updated:
Deccan Herald

ಬೆಂಗಳೂರು: ‘ಕೇವಲ ಬಾಯಿ ಮಾತಿನಲ್ಲಿ ಕಾಶ್ಮೀರದ ವಿಷಯವನ್ನು ಮಾತನಾಡುತ್ತಿದ್ದಾರೆಯೇ ಹೊರತು ಅಲ್ಲಿನ ಮೂಲ ನಿವಾಸಿಗಳ ಭಾವನೆಗಳನ್ನು, ಕಷ್ಟಗಳನ್ನು ಯಾರೂ ಅರ್ಥ ಮಾಡಿಕೊಳ್ಳಲಿಲ್ಲ’ ಎಂದು ‘ಕಶೀರ’ ಕಾದಂಬರಿಯ ಕತೃ ಸಹನಾ ವಿಜಯಕುಮಾರ್ ಅಭಿಪ್ರಾಯಪಟ್ಟರು.

ಮಂಥನ ಸಂಘಟನೆ ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ಕಾಶ್ಮೀರದ ಭೂತ-ವರ್ತಮಾನಗಳ ಅವಲೋಕನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

‘ಭಯೋತ್ಪಾದನೆ, ಹಿಂಸಾಕೃತ್ಯಗಳನ್ನು ಮಾಡುತ್ತಿರುವುದು ಸರಿಯೋ, ತಪ್ಪೋ ಎಂದು ಆಲೋಚಿಸುತ್ತಿರುವ, ಜಿಗ್ನಾಸೆಯನ್ನು ಹುಟ್ಟಿಸಿಕೊಂಡಿರುವ ಎಷ್ಟೋ ಯುವ ಮನಸ್ಸುಗಳು ಕಾಶ್ಮೀರದಲ್ಲಿವೆ. ಅವರನ್ನೆಲ್ಲ ನಮ್ಮೊಂದಿಗೆ ಸೇರಿಸಿಕೊಳ್ಳುವ ಪ್ರಯತ್ನ ಆಗಬೇಕಿದೆ’ ಎಂದು ಹೇಳಿದರು.

‘ನನ್ನ ಕಾದಂಬರಿಯಲ್ಲಿ ಬರುವ ಪ್ರತಿ ವಿಚಾರಕ್ಕೂ ಆದಾರ ಇದೆ. ಕಾಶ್ಮೀರ ಮುಸ್ಲಿಮರ ನಡುವಿದ್ದು, ಅವರ ವಿಚಾರಗಳನ್ನು ತಿಳಿದುಕೊಳ್ಳಬೇಕೆಂದು ಅಲ್ಲಿನ ಹೋಟೆಲ್‌ವೊಂದರಲ್ಲಿ ತಂಗಿದ್ದೆ. ಆ ಹೋಟೆಲ್‌ನ ವ್ಯವಸ್ಥಾಪಕ ಬೆಳಗ್ಗಿನ ಜಾವ 2ಗಂಟೆವರೆಗೂ ನನ್ನೊಂದಿಗೆ ಮಾತನಾಡುತ್ತಿದ್ದ. ಅವರದ್ದು ಒಂದೇ ವಾದ ಕಾಶ್ಮೀರ ಸ್ವತಂತ್ರವಾಗಬೇಕು.’

‘ಹಾಗಾಗರೆ ನೀವು ಪರೋಕ್ಷವಾಗಿ ಪಾಕಿಸ್ತಾನಕ್ಕೆ ಏಕೆ ಬೆಂಬಲಿಸುತ್ತೀರಾ ಎಂದು ಕೇಳಿದ್ದರೆ, ನಾವೆಲ್ಲ ಮುಸ್ಲಿಮರು ಅದಕ್ಕೆ ಎಂದು ಹೇಳಿದರು. ಮೊದ ಮೊದಲು ತಾಳ್ಮೆಯಿಂದ ಸಂವಾದಿಸುತ್ತಿದ್ದ ನಾನು, ನಂತರ ತಾಳ್ಮೆ ಕಳೆದುಕೊಂಡೆ. ನಮ್ಮಿಬ್ಬರ ನಡುವೆ ಜಳವಾಯಿತು. ಸಿಟ್ಟಿನಿಂದ ಕೊಠಡಿಯ ಬಾಗಿಲನ್ನು ಜೋರಾಗಿ ಎಳೆದುಕೊಂಡು ಹೋದ ಅವರ ನಡೆಯನ್ನು ನೋಡಿ ಭಯವಾಯಿತು. ಅದೃಷ್ಟವಶಾತ್‌ ಹಾಗೇನು ಆಗಲಿಲ್ಲ.’

‘ಅಲ್ಲಿಂದ ಬಂದ ನಂತರವೇ ತಿಳಿದಿದ್ದು, ಹೀಗೆ ಹಿಂದೆಯೊಬ್ಬರು ಜಗಳವಾಡಿದ್ದಕ್ಕೆ ಹೋಟೆಲ್‌ ಕೊಠಡಿಗೆ ಬೆಂಕಿ ಹಚ್ಚಿದ್ದರಂತೆ. ಈ ರೀತಿಯ ಹಲವು ಅಪಾಯಗಳಿಂದ ಸ್ವಲ್ಪದರಲ್ಲೇ ಬಚಾವಾಗಿ ಬಂದಿದ್ದೇನೆ’ ಎಂದು ಕಾಶ್ಮೀರ ಅನುಭವಗಳನ್ನು ಹಂಚಿಕೊಂಡರು.

ಅಂಕಣಕಾರ ಪ್ರೇಮ್‌ಶೇಖರ್, ‘ಜಮ್ಮು ಕಾಶ್ಮೀರದ ಭೂಮಿಯನ್ನು ವಶಕ್ಕೆ ತೆಗೆದುಕೊಳ್ಳುವ ಪ್ರಯತ್ನದಲ್ಲಿರುವ ಪಾಕಿಸ್ತಾನಕ್ಕೆ ಅಲ್ಲಿ ತಮ್ಮ ಜನರಿದ್ದಾರೆ ಅಥವಾ ಅಲ್ಲಿನ ಜನರ ಹಿತರಕ್ಷಣೆ ಮಾಡಬೇಕು ಎನ್ನುವ ಯಾವುದೇ ಅಭಿಲಾಷೆಯಿಲ್ಲ. ಜಮ್ಮು ಕಾಶ್ಮೀರ ವಶಪಡಿಸಿಕೊಂಡರೇ ಮೂರು ಪ್ರಮುಖ ನದಿಗಳಾದ ಇಂಡಸ್, ಜೇಲಂ, ಚೇನಬ್‌ ಜಲಮೂಲಗಳು ತಮ್ಮದಾಗುತ್ತವೆ. ಧರ್ಮ ವಿಸ್ತರಣೆ ಮಾಡಬಹುದು ಎನ್ನುವುದು ಪಾಕಿಸ್ತಾನದ ಚಿಂತನೆ’ ಎಂದು ಹೇಳಿದರು.

‘ಕಾಶ್ಮೀರದಲ್ಲಿ ಧಾರ್ಮಿಕ ದ್ವೇಷ ಜೀವಂತವಾಗಿರುವಂತೆ ನೋಡಿಕೊಳ್ಳಲು ಪಾಕಿಸ್ತಾನ ಪ್ರತಿ ವರ್ಷ ಸುಮಾರು ₹800 ಕೋಟಿ ಖರ್ಚು ಮಾಡುತ್ತಿದೆ. ಕಲ್ಲು ತೂರಾಟ ನಡೆಸುವುದು ಸೇರಿದಂತೆ ಹಲವು ರೀತಿಯ ಹೋರಾಟಗಳನ್ನು ಮಾಡಲು ಪಾಕಿಸ್ತಾನ ಯೋಜನೆಗಳನ್ನು ರೂಪಿಸುತ್ತಿದೆ. ನರೇಂದ್ರ ಮೋದಿ ಪ್ರಧಾನಿಯಾದ ನಂತರ ಇಂತಹ ಚಟುವಟಿಕೆಗಳಿಗೆ ಕಡಿವಾಣ ಹಾಕಿದ್ದಾರೆ’ ಎಂದರು.

ಕಾಶ್ಮೀರ ಪಂಡಿತ ದಿಲೀಪ್ ಕಚ್ರೂ, ‘ಪಾಕಿಸ್ತಾನಕ್ಕೆ ಜಮ್ಮು ಕಾಶ್ಮೀರವನ್ನು ಸೇರಿಸಬೇಕೆಂಬ ಉದ್ದೇಶ ಹೊಂದಿರುವವರು ನಿರಂತರವಾಗಿ ದಾಳಿ ನಡೆಸಿದ್ದರಿಂದ ಕಾಶ್ಮೀರಿ ಪಂಡಿತರು ಬೇರೆ ರಾಜ್ಯಗಳಿಗೆ ಹೋದರು. ಆದರೆ ಇವರನ್ನು ವಲಸಿಗರು ಎಂದು ಗುರುತಿಸಲಾಗುತ್ತಿದೆ. ದೇಶದ ಬೇರೆ ರಾಜ್ಯಗಳಿಂದ ಇಲ್ಲಿ ಬಂದು ನೆಲೆಸಿರುವವರನ್ನು ವಲಸಿಗರೆನ್ನುವುದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘28 ವರ್ಷಗಳ ಹಿಂದೆ ಕಾಶ್ಮೀರ ಬಿಟ್ಟು ಬೆಂಗಳೂರಿಗೆ ಬಂದು ನೆಲಸಿದೆ. ಮಗಳನ್ನು ಶಾಲೆಗೆ ಸೇರಿಸುವಾಗ ಕಾಶ್ಮೀರ ಸರ್ಕಾರದಿಂದ ದೃಢೀಕರಣ ಪತ್ರ ನೀಡುವಂತೆ ಸೂಚಿಸಲಾಗಿತ್ತು. ಇನ್ನೊಂದೆಡೆ ವಲಸೆ ಹೋಗಲು ಏನು ಕಾರಣ ಎಂದು ತಿಳಿದು ಸಮಸ್ಯೆ ಬಗೆಹರಿಸಲು ಪ್ರಯತ್ನಿಸದ ಜಮ್ಮು ಕಾಶ್ಮೀರ ಸರ್ಕಾರ, ಸ್ವಂತ ಕಾರಣಕ್ಕಾಗಿ ವಲಸೆ ಹೋಗಿದ್ದಾರೆ ಎಂದು ಹೇಳಿಕೆಗಳನ್ನು ನೀಡುತ್ತಿರುವುದು ಆತಂಕಕಾರಿ ಸಂಗತಿ’ ಎಂದರು.

ಲೇಖಕ ಸಂದೀಪ್ ಬಾಲಕೃಷ್ಣ ಮಾತನಾಡಿ, ‘ಮೂಲಭೂತವಾದವನ್ನು ಹೊಂದಿರುವ ಇಸ್ಲಾಂ ಕಾಶ್ಮೀರದಲ್ಲಿ ಜಿಹಾದ್ (ಧರ್ಮ ವಿಸ್ತರಣೆ) ಮಾಡುತ್ತಿದೆ. ಭಯೋತ್ಪಾದನೆಯು ಅಚಾನಕ್ಕಾಗಿ ಬಂದಿದ್ದು ಎಂದು ಹೇಳುವ ಬುದ್ಧಿಜೀವಿಗಳು ಅದು ಧರ್ಮದ ಮೂಲದಲ್ಲೇ ಇದೆ ಎಂಬುದನ್ನು ಇನ್ನೂ ಅರಿತುಕೊಂಡಿಲ್ಲ’ ಎಂದು ತಿಳಿಸಿದರು. 

ಬರಹ ಇಷ್ಟವಾಯಿತೆ?

 • 8

  Happy
 • 1

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !