ಭಾನುವಾರ, ಮೇ 9, 2021
25 °C

ಸಿಂಗಪುರ: ಕೇರಳ ಪರಿಹಾರ ನಿಧಿಗೆ ₹26.53 ಲಕ್ಷ ನೆರವು

ಪಿಟಿಐ Updated:

ಅಕ್ಷರ ಗಾತ್ರ : | |

ಸಿಂಗಪುರ: ಇಲ್ಲಿ ನೆಲೆಸಿರುವ ಸುಮಾರು 40 ಸಾವಿರ ಕೇರಳಿಗರು ಮತ್ತು ರೆಡ್‌ ಕ್ರಾಸ್‌ ಸಂಸ್ಥೆ ಜಂಟಿಯಾಗಿ ಕೇರಳ ಪ್ರವಾಹ ಸಂತ್ರಸ್ತರ ಪರಿಹಾರ ನಿಧಿಗೆ ಒಟ್ಟು ₹26.53 ಲಕ್ಷ ನೆರವು ನೀಡಿದ್ದಾರೆ.

‘ಕೇರಳದಲ್ಲಿ ನೆಲೆಸಿರುವ ನಮ್ಮ ಸ್ನೇಹಿತರು ಮತ್ತು ಸಂಬಂಧಿಗಳಿಗೆ ನೆರವಾಗಲು ಹಣ ಸಂಗ್ರಹಿಸಿದ್ದೇವೆ.’ ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಈಶ್ವರನ್‌ ತಿಳಿಸಿದ್ದಾರೆ.

ಹಣ ಸಂಗ್ರಹಕ್ಕಾಗಿ ಶಾಪಿಂಗ್‌ ಮಾಲ್‌ಗಳಲ್ಲಿ ಬೂತ್‌ಗಳನ್ನು ತೆರೆಯಲಾಗಿತ್ತು. ಕೇರಳ ಮೂಲದ ಕಲಾವಿದ ಲಕ್ಷ್ಮೀ ಮೋಹನ್‌ ಬಾಬು ವರ್ಣಚಿತ್ರ ಪ್ರದರ್ಶನದಿಂದ ಬಂದ ₹10.61ಲಕ್ಷ ಹಣವನ್ನು ಪರಿಹಾರ ನಿಧಿಗೆ ನೀಡಿದ್ದಾರೆ. 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು