ಸೋಮವಾರ, ಏಪ್ರಿಲ್ 19, 2021
32 °C

ಫೇಸ್‌ಬುಕ್‌, ವಾಟ್ಸ್‌ಆ್ಯಪ್‌, ಟ್ವಿಟರ್‌ ಸಮಸ್ಯೆ ನಿವಾರಣೆ: ಸಹಜ ಸ್ಥಿತಿಗೆ

ಏಜನ್ಸಿಸ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ಸಾಮಾಜಿಕ ತಾಣಗಳ ಬಳಕೆದಾರರು ಬುಧವಾರ ರಾತ್ರಿ ತಾಂತ್ರಿಕ ಸಮಸ್ಯೆ ಎದುರಿಸಿದರು. ಫೊಟೊ, ವಿಡಿಯೊಗಳು ಅಪ್ಲೋಡ್‌, ಡೌನ್‌ಲೋಡ್‌ ಆಗದೇ ಕಿರಿಕಿರಿ ಅನುಭವಿಸಿದರು. ಸದ್ಯ ಈ ಸಮಸ್ಯೆ ಅಂತ್ಯಗೊಂಡಿದ್ದು, ಎಲ್ಲ ತಾಣಗಳು ಸಹಜ ಸ್ಥಿತಿಗೆ ಮರಳಿವೆ. 

ಫೇಸ್‌ಬುಕ್‌, ವಾಟ್ಸಾಪ್‌, ಟ್ವಿಟರ್‌, ಇನ್‌ಸ್ಟಾಗ್ರಾಂ ಬಳಕೆದಾರರು ಜಗತ್ತಿನಾದ್ಯಂತ ಬುಧವಾರ ಸಮಸ್ಯೆ ಎದುರಿಸಿದರು. ಇದಾದ ಕೆಲವೇ ಗಂಟೆಗಳಲ್ಲಿ ಟ್ವಿಟರ್‌ನಲ್ಲಿ ಸಂದೇಶಗಳನ್ನು ಹಂಚಿಕೊಂಡ ಫೇಸ್‌ಬುಕ್‌, ಟ್ವಿಟರ್‌, ಇನ್‌ಸ್ಟಾಗ್ರಾಂ ಕೂಡಲೇ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದವು. ಸೇವೆಯಲ್ಲಾದ ಸಮಸ್ಯೆ ಬಳಕೆದಾರರ ಕ್ಷಮೆ ಕೋರಿದವು. ಗುರುವಾರ ಬೆಳಗ್ಗೆ 5ರ ಹೊತ್ತಿಗೆ ಸಂದೇಶಗಳನ್ನು ಹಂಚಿಕೊಂಡಿರುವ ಸಾಮಾಜಿಕ ತಾಣಗಳು, ಸಮಸ್ಯೆ ಬಗೆಹರಿದಿರುವುದಾಗಿ ತಿಳಿಸಿವೆ. ಇದರ ಜತೆಗೆ ಗ್ರಾಯಕರು ಎದುರಿಸುತ್ತಿದ್ದ ಸಮಸ್ಯೆ ಅಂತ್ಯವಾಗಿದ್ದು, ಎಂದಿನಂತೇ ಎಲ್ಲವೂ ಕಾರ್ಯ ಕಾರ್ಯನಿರ್ವಹಿಸುತ್ತಿವೆ. 

ಆದರೆ, ಟ್ವಿಟರ್‌ ಮಾತ್ರ ಕೆಲ ವರ್ಗದ ಬಳಕೆದಾರರಿಗೆ ಸಮಸ್ಯೆಯಾಗುವ ಮುನ್ಸೂಚನೆ ನೀಡಿದೆ. ‘ಸಮಸ್ಯೆ 100%ರಷ್ಟು ಸರಿಹೋಗಿದೆ. ಆದರೆ, ಕೆಲ ವರ್ಗದ ಬಳಕೆದಾರರಿಗೆ ಸಣ್ಣ ಪ್ರಮಾಣದ ತೊಂದರೆಯಾಗುವ ಸಾಧ್ಯತೆಗಳಿವೆ,’ ಎಂದು ಅದು ಟ್ವೀಟ್‌ನಲ್ಲಿ ತಿಳಿಸಿದೆ. ಬುಧವಾರ ಕಾಣಿಸಿಕೊಂಡ ಸಮಸ್ಯೆ ಸಣ್ಣದು ಎಂದಿರುವ ಟ್ವಿಟರ್‌ ಅದನ್ನು ಬಹಿರಂಗವಾಗಿ ವಿವರಿಸಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು