ಮುಳ್ಳೂರು ನಾಗರಾಜ ಕಾವ್ಯ ಪ್ರಶಸ್ತಿಗೆ ಸೌಮ್ಯ ಆಯ್ಕೆ

7

ಮುಳ್ಳೂರು ನಾಗರಾಜ ಕಾವ್ಯ ಪ್ರಶಸ್ತಿಗೆ ಸೌಮ್ಯ ಆಯ್ಕೆ

Published:
Updated:
ಸೌಮ್ಯ ಕೆ.ಆರ್‌.

ಚಾಮರಾಜನಗರ: ಪಟ್ಟಣದ ರಂಗವಾಹಿನಿ ಸಂಸ್ಥೆಯು ನೀಡುವ ರಾಜ್ಯಮಟ್ಟದ ಮುಳ್ಳೂರು ನಾಗರಾಜ ಕಾವ್ಯ ಪ್ರಶಸ್ತಿಗೆ ರಾಮನಗರ ಜಿಲ್ಲೆ ಕನಕಪುರದ ಸೌಮ್ಯ ಕೆ.ಆರ್. ಅವರ ’ಬಯಲಿಗೂ ಗೋಡೆಗಳು’ ಕವನ ಸಂಕಲನ ಆಯ್ಕೆಯಾಗಿದೆ.

ಪ್ರಶಸ್ತಿಯು ₹10 ಸಾವಿರ ನಗದು, ಫಲಕ, ಪ್ರಶಸ್ತಿ ಪತ್ರಗಳನ್ನು ಹೊಂದಿದೆ. ಚಾಮರಾಜನಗರದಲ್ಲಿ ಇದೇ 30ರಂದು  ನಡೆಯುವ ಸಮಾರಂಭದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ರಂಗವಾಹಿನಿ ಅಧ್ಯಕ್ಷ ಸಿ.ಎಂ. ನರಸಿಂಹಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೌಮ್ಯ ‌ಅವರು ಇತ್ತೀಚಿನ ಯುವ ಬರಹಗಾರರಲ್ಲಿ ಒಬ್ಬರು. ಸದ್ಯ ಅವರು ಬೆಂಗಳೂರಿನ ಸೆಂಟ್ರಲ್ ಫಾರ್ ಸೋಷಿಯಲ್ ಡೆವಲಪ್‌ಮೆಂಟ್ ಸಂಸ್ಥೆಯಲ್ಲಿ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !