‘ಡಿಯರ್ ಜಿಂದಗಿ’ ಸಿನಿಮಾದಲ್ಲಿ ಅಲಿಯಾ ಭಟ್ ‘ಬಿಚಿ ವೇವ್ಸ್’ ವಿನ್ಯಾಸ ಮಾಡಿಕೊಳ್ಳುವ ಮೂಲಕ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಸ್ಟ್ರೇ ಬಳಿಸಿ ನೀವು ಈ ರೀತಿಯ ಕೇಶವಿನ್ಯಾಸಕ್ಕೆ ಪ್ರಯತ್ನಿಸಿರಬಹುದು. ಇದು ಈಗಿನ ಟ್ರೆಂಡ್ ಕೂಡ ಆಗಿದೆ. ಆಧುನಿಕ ಉಡುಪುಗಳಿಗೆ ಈ ವಿನ್ಯಾಸ ಹೊಂದಿಕೆಯಾಗುತ್ತದೆ.
**
ಇಬ್ಬರು ಸುಂದರಿಯರ ಕೂದಲ ನೋಡಿ
‘ಯೇ ದಿಲ್ ಹೈ ಮುಷ್ಕಿಲ್’ ಸಿನಿಮಾದಲ್ಲಿ ಐಶ್ವರ್ಯಾ ರೈ ಹಾಗೂ ಅನುಷ್ಕಾ ಶರ್ಮಾ, ‘ವೇವಿ ಟ್ರೇಸಸ್’ ವಿನ್ಯಾಸ ಮಾಡಿಸಿಕೊಂಡಿದ್ದರು. ಅದರಲ್ಲೂ ಐಶ್ವರ್ಯಾ ಕೂದಲಿಗೆ ಹಾಕಿದ್ದ ಚಾಕೊಲೇಟ್ ಬಣ್ಣ ಅವರ ಸೌಂದರ್ಯವನ್ನು ಇಮ್ಮಡಿಸಿತ್ತು.
**
ಹೊಸ ನೋಟದಲ್ಲಿ ರಣವೀರ್ಸಿಂಗ್
‘ರಾಮ್ ಲೀಲಾ’ ಸಿನಿಮಾ ನೋಡಿದವರಿಗೆ ರಣವೀರ್ ಹೇರ್ಸ್ಟೈಲ್ ನೆನಪಾಗಬಹುದು. ಹಾಡಿನ ದೃಶ್ಯವೊಂದರಲ್ಲಿ ಕೈಬೆರಳು ಕುಣಿಸುತ್ತಾ ಅವರು ನರ್ತಿಸುತ್ತಿದ್ದರೆ, ಅಭಿಮಾನಿಗಳ ಕಣ್ಣು ಕುಕ್ಕುತ್ತಿದ್ದುದು ಅವರ ಕೂದಲು.
**
ಮಹಿರಾಗೆ ಸರಳತೆಯೇ ಮೆರುಗು
ಪಾಕಿಸ್ತಾನದ ನಟಿ ಮಹಿರಾ ಖಾನ್, ರಯೀಸ್ ಚಿತ್ರದಲ್ಲಿ ನಟನೆಯ ಜತೆಗೆ ಹೇರ್ಸ್ಟೈಲ್ ಮೂಲಕವೂ ಗಮನಸೆಳೆದಿದ್ದರು. ಕಪ್ಪು ಉಡುಪನ್ನು ಧರಿಸಿ ಕೂದಲು ಇಳಿಬಿಟ್ಟಿದ್ದ ಅವರ ಶೈಲಿ ಬಹುಜನರ ಮೆಚ್ಚುಗೆ ಗಳಿಸಿತ್ತು.
**
ಟೈಗರ್ ಶ್ರಾಫ್
ಇವರ ನಟನೆಯ ಬಗ್ಗೆ ಸಿನಿಪ್ರಿಯರು ಅಂಥ ಮೆಚ್ಚುಗೆ ವ್ಯಕ್ತಪಡಿಸಲಿಲ್ಲ. ಆದರೆ ಸ್ಟೈಲ್ನಲ್ಲಿ ಹೆಚ್ಚಿನ ಅಂಕ ಪಡೆದಿದ್ದರು. ‘ಭಾಗಿ’ ಸಿನಿಮಾದಲ್ಲಿ ನೀರಿನಿಂದ ಎದ್ದು ಬರುವ ದೃಶ್ಯದಲ್ಲಿ ಇವರ ಕೂದಲನ್ನು ಮತ್ತೆಮತ್ತೆ ನೋಡಬೇಕು ಎನಿಸುತ್ತಿದ್ದುದಂತೂ ನಿಜ. ಕೋಲು ಮುಖದ ಟೈಗರ್ ಶ್ರಾಫ್ಗೆ ಕೂದಲನ್ನು ಎತ್ತಿಬಾಚುವ ಶೈಲಿ ಚೆನ್ನಾಗಿ ಒಪ್ಪುತ್ತದೆ.
**
‘ದಿಲ್ ಧಡಕ್ನೆ ದೊ’ ಪ್ರಿಯಾಂಕಾ
ಈ ಸಿನಿಮಾದಲ್ಲಿ ಪ್ರಿಯಾಂಕ ಫ್ಯಾಷನೆಬಲ್ ಆಗಿ ಕಾಣಿಸಿಕೊಂಡಿದ್ದರು. ಮೇಲೆ ಸ್ಟ್ರೇಟ್ ಮಾಡಿಸಿ ಕೂದಲಿನ ತುದಿಯಲ್ಲಿ ಸಹಜವಾಗಿ ಬಿಡುವುದು ಇದರ ಶೈಲಿ.