ಸಹೋದರ ಸಲ್ಮಾನ್ ಖಾನ್ ಜತೆ ‘ದಬಾಂಗ್’ಚಿತ್ರದಲ್ಲಿ ಅಭಿನಯಿಸಿ ಖ್ಯಾತಿ ಪಡೆದಿರುವ ಅರ್ಬಾಜ್, ಈ ಚಿತ್ರದ ಮೂರನೇ ಸರಣಿ ‘ದಬಾಂಗ್–3’ ಶೀಘ್ರದಲ್ಲೇ ಆರಂಭವಾಗಲಿದೆ ಎಂದೂ ಹೇಳಿದ್ದಾರೆ. ದಬಾಂಗ್ ಚಿತ್ರ ಸರಣಿಯಲ್ಲಿ ಮಾಜಿ ಪತ್ನಿ ಮಲೈಕಾ ಅರೋರಾ, ನಟಿ ಕರೀನಾ ಕಪೂರ್ ತುಂಬಾ ಜನಪ್ರಿಯರಾದರು. ಇದರಿಂದ ಅವರಿಗೆ ಅವಕಾಶಗಳೂ ಹೆಚ್ಚಿದವು. ಅದಕ್ಕಾಗಿ ದಬಾಂಗ್ನ ಮೂರನೇ ಸರಣಿಯಲ್ಲಿ ಸನ್ನಿಯನ್ನೇ ಆಯ್ಕೆ ಮಾಡಲಾಗುವುದು ಎಂದು ಅರ್ಬಾಜ್ ನುಡಿದಿದ್ದಾರೆ.