ನವದೆಹಲಿ: ಭಾರತದ ಶಿವ ಥಾಪ ಹಾಗೂ ಎಲ್.ಸರಿತಾ ದೇವಿ ಇಂಡಿಯಾ ಓಪನ್ ಬಾಕ್ಸಿಂಗ್ ಟೂರ್ನಿಯಲ್ಲಿ ಮಂಗಳವಾರ ಸೆಮಿಫೈನಲ್ ಪ್ರವೇಶಿಸಿದ್ದಾರೆ.

60ಕೆ.ಜಿ ಪುರುಷರ ವಿಭಾಗದ ಪೈಪೋಟಿಯಲ್ಲಿ ಶಿವಥಾಪ ಉಜ್ಬೇಕಿಸ್ತಾನದ ಶೆರ್ಬಕ್ ರಕ್‌ಮತೆಲ್ಲವ್ ಎದುರು ಸೋತರು. ಮೊದಲ ಮೂರು ನಿಮಿಷಗಳಲ್ಲಿ ಎದುರಾಳಿಗೆ ಪಾಯಿಂಟ್ಸ್ ಬಿಟ್ಟುಕೊಟ್ಟ ಭಾರತದ ಆಟಗಾರ ಬಳಿಕ ಜಿದ್ದಾಜಿದ್ದಿನ ಪೈಪೋಟಿ ನೀಡಿದರು. ಮುಂದಿನ ಪಂದ್ಯದಲ್ಲಿ ಅವರು ಭಾರತದವರೇ ಆದ ಮನೀಷ್ ಕೌಶಿಕ್ ವಿರುದ್ಧ ಆಡಲಿದ್ದಾರೆ.

ಮನೀಷ್ ಕ್ವಾರ್ಟರ್‌ಫೈನಲ್ ಬೌಟ್‌ನಲ್ಲಿ ಫಿಲಿಪ್ಪೀನ್ಸ್‌ನ ಚಾರ್ಲೆ ಸೂರೆಜ್ ವಿರುದ್ಧ ಗೆದ್ದರು.

ಅಮಿತ್ ಪಂಗಲ್ 49ಕೆ.ಜಿ ಪುರುಷರ ವಿಭಾಗದಲ್ಲಿ 5–0ರಲ್ಲಿ ಸಿಂಪ್ಲೈಸ್ ಫಾಟ್‌ಸಲಾ ವಿರುದ್ಧ ಗೆದ್ದರು. ಮುಂದಿನ ಪಂದ್ಯದಲ್ಲಿ ಲಾಲ್‌ಬಿಕ್ಕಿಮಾ ನುಟ್ಲೈ ಅವರನ್ನು ಎದುರಿಸಲಿದ್ದಾರೆ. ಲಾಲ್‌ಬಿಕ್ಕಿಮಾ ಕ್ವಾರ್ಟರ್‌ಫೈನಲ್‌ನಲ್ಲಿ ಕೆನ್ಯಾದ ಶಫಿ ಹಸನ್ ಅವರನ್ನು ಮಣಿಸಿದ್ದಾರೆ.

ಮಹಿಳೆಯರ 60ಕೆ.ಜಿ ವಿಭಾಗದಲ್ಲಿ ಭಾರತದ ಎಲ್.ಸರಿತಾ ದೇವಿ ಥಾಯ್ಲೆಂಡ್‌ನ ಪೆಮ್‌ವಿಲೈ ಲೊಪೆಮ್ ಎದುರು 4–1ರಲ್ಲಿ ಗೆದ್ದರು. ಮುಂದಿನ ಸುತ್ತಿನಲ್ಲಿ ಭಾರತದವರೇ ಆದ ಪ್ರಿಯಾಂಕಾ ಚೌಧರಿ ವಿರುದ್ಧ ಆಡಲಿದ್ದಾರೆ. ಪ್ರಿಯಾಂಕಾ 5–0ರಲ್ಲಿ ಹಸ್‌ವತ್ಸುನ್ ಹಸನ್‌ಬೈ ವಿರುದ್ಧ ಗೆದ್ದರು.

ಸ್ವೀಟಿ ಬೋರಾ 75ಕೆ.ಜಿ ವಿಭಾಗದಲ್ಲಿ ನೇಪಾಳದ ಸರಸ್ವತಿ ರಾಣಾ ವಿರುದ್ಧ ಗೆದ್ದರು. ಶಶಿ ಚೋಪ್ರಾ ಭಾರತದ ವೈ.ಸಂಧ್ಯಾರಾಣಿ ಮೇಲೆ ಗೆದ್ದರು.

ಸೋನಿಯಾಗೆ ಸೋಲು: ಭಾರತದ ಭರವಸೆಯ ಸ್ಪರ್ಧಿ ಸೋನಿಯಾ ಲಾಥರ್ ಮಹಿಳೆಯರ 57ಕೆ.ಜಿ ವಿಭಾಗದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ 3–2ರಲ್ಲಿ ಸೋತಿದ್ದಾರೆ. ಇಂಡೊನೇಷ್ಯಾದ ಕ್ರಿಸ್ಟಿಯನ್ ಮಾರ್ವನ್ ಜೆಂಬವ್ ಎದುರು ಅವರು ಪರಾಭವಗೊಂಡರು.

ಪೂಜಾ ರಾಣಿ (75ಕೆ.ಜಿ) 2–3ರಲ್ಲಿ ಎಸೆನಿ ಕ್ಲೊಟೈಡ್ ಎದುರು ಸೋತರು. ವೈ.ಶ್ಯಾಮ್ ಕುಮಾರ್ (49ಕೆ.ಜಿ), ಸತೀಶ್ ಕುಮಾರ್ (91ಕೆ.ಜಿ), ಅಂಕುಶ್ ದಹಿಯಾ (60ಕೆ.ಜಿ) ಕೂಡ ಸೋತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.