ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

INDW vs AUSW 1st ODI: ಭಾರತ ವಿರುದ್ಧ ಆಸ್ಟ್ರೇಲಿಯಾಗೆ 6 ವಿಕೆಟ್ ಜಯ

Published 28 ಡಿಸೆಂಬರ್ 2023, 16:29 IST
Last Updated 28 ಡಿಸೆಂಬರ್ 2023, 16:29 IST
ಅಕ್ಷರ ಗಾತ್ರ

ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಭಾರತ ವಿರುದ್ಧದ ಮಹಿಳೆಯರ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 6 ವಿಕೆಟ್‌ಗಳ ಗೆಲುವು ದಾಖಲಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 282 ರನ್ ಗಳಿಸಿತ್ತು. ಸವಾಲಿನ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ವನಿತೆಯರು 46.3 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 285 ರನ್ ಗಳಿಸುವ ಮೂಲಕ ಜಯ ಸಾಧಿಸಿದರು.

ಆಸ್ಟ್ರೇಲಿಯಾ ಪರ ಫೋಬೆ ಲಿಚ್‌ಫೀಲ್ಡ್(78), ಎಲಿಸ್ ಪೆರಿ (75) ಮತ್ತು ಟಹ್ಲಿಯಾ ಮೆಗ್ರಾ(68*) ಅರ್ಧ ಶತಕ ಸಿಡಿಸುವ ಮೂಲಕ ಗೆಲುವಿನ ರೂವಾರಿಗಳಾದರು. ಬೆತ್‌ ಮೂನಿ (42) ಉಪಯುಕ್ತ ಕಾಣಿಕೆ ನೀಡಿದರು. ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಪಂದ್ಯ ಗೆದ್ದು ಇತಿಹಾಸ ನಿರ್ಮಿಸಿದ್ದ ಭಾರತದ ವನಿತೆಯರು, ಗೆಲುವಿನ ಓಟ ಮುಂದುವರಿಸುವಲ್ಲಿ ವಿಫಲರಾದರು.

ಇದಕ್ಕೂ ಮುನ್ನ, ಭಾರತದ ಪರ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಾದ ಜೆಮಿಮಾ ರಾಡ್ರಿಗಸ್‌ (77 ಎಸೆತಗಳಲ್ಲಿ 82) ಮತ್ತು ಪೂಜಾ ವಸ್ತ್ರಾಕರ್ (46 ಎಸೆತಗಳಲ್ಲಿ 62) ಉಪಯುಕ್ತ ಆಟವಾಡಿದರು. ಆರಂಭಿಕ ಆಟಗಾರ್ತಿ ಯಸ್ತಿಕಾ ಭಾಟಿಯಾ (49) ಪ್ರಮುಖ ಕಾಣಿಕೆ ನೀಡುವ ಮೂಲಕ ಭಾರತದ ಉತ್ತಮ ಮೊತ್ತಕ್ಕೆ ಕಾರಣರಾಗಿದ್ದರು.

ಸಂಕ್ಷಿಪ್ತ ಸ್ಕೋರ್:

ಭಾರತ : 282/8

–ಜೆಮಿಮಾ ರಾಡ್ರಿಗಸ್‌: 82

–ಪೂಜಾ ವಸ್ತ್ರಾಕರ್: 62

ಆಸ್ಟ್ರೇಲಿಯಾ: 46.3 ಓವರ್‌ಗಳಲ್ಲಿ 285/4

–ಫೋಬೆ ಲಿಚ್‌ಫೀಲ್ಡ್:78

–ಎಲಿಸ್ ಪೆರಿ: 75

–ಟಹ್ಲಿಯಾ ಮೆಗ್ರಾತ್(68*)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT