ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್: ಬಂಗಾಳ ಸಂಸ್ಥೆಗೆ ಚುನಾವಣೆ 28ರಂದು

Last Updated 7 ಸೆಪ್ಟೆಂಬರ್ 2019, 20:34 IST
ಅಕ್ಷರ ಗಾತ್ರ

ಕೋಲ್ಕತ್ತ : ಬಂಗಾಳ ಕ್ರಿಕೆಟ್ ಸಂಸ್ಥೆಯು ತನ್ನ ಆಡಳಿತ ಮಂಡಳಿಯ ಚುನಾವಣೆಯನ್ನು ಸೆಪ್ಟೆಂಬರ್ 28ರಂದು ನಡೆಸುವುದಾಗಿ ಘೋಷಿಸಿದೆ.

ಸೆ.28ರೊಳಗೆ ರಾಜ್ಯ ಸಂಸ್ಥೆಗಳು ಚುನಾವಣೆ ಮುಗಿಸಬೇಕು ಮತ್ತು ಬಿಸಿಸಿಐನಲ್ಲಿ ಪ್ರತಿನಿಧಿಸುವ ತಮ್ಮ ಸದಸ್ಯರ ಪಟ್ಟಿಯನ್ನು ಕಳಿಸಬೇಕು ಎಂದು ಕ್ರಿಕೆಟ್ ಆಡಳಿತ ಸಮಿತಿ (ಸಿಒಎ) ಶುಕ್ರವಾರ ಸೂಚಿಸಿತ್ತು. ಈ ಮೊದಲು ನಿರ್ಧರಿಸಿದಂತೆ ಸೆ 14ರ ಗಡುವನ್ನು 28ರವರೆಗೂ ವಿಸ್ತರಿಸಿತ್ತು. ಇದರಿಂದಾಗಿ ರಾಜ್ಯ ಸಂಸ್ಥೆಗಳಲ್ಲಿ ಚುನಾವಣೆ ಪ್ರಕ್ರಿಯೆ ಚುರುಕುಗೊಂಡಿದೆ.

ಬಂಗಾಳ ಸಂಸ್ಥೆ ಯ ಅಧ್ಯಕ್ಷ ಸೌರವ್ ಗಂಗೂಲಿ ಅವರು ಪುನರಾಯ್ಕೆಗಾಗಿ ನಾಮಪತ್ರ ಸಲ್ಲಿಸಲಿದ್ಧಾರೆ. ಅವರಿಗೆ ಯಾರು ಎದುರಾಳಿಯಾಗುತ್ತಾರೆ ಎಂಬುದು ಇನ್ನೂ ಖಚಿತವಾಗಿಲ್ಲ.

ಬಂಗಾಳ ಸಂಸ್ಥೆಗೆ 2015ರಲ್ಲಿ ಚುನಾವಣೆ ನಡೆದಿತ್ತು. ಅದರ ನಂತರ ಮತ್ತೆ ಚುನಾವಣೆಗಳು ನಡೆದಿಲ್ಲ.

ಒಡಿಶಾ ಕ್ರಿಕೆಟ್ ಸಂಸ್ಥೆ (ಒಸಿಎ) ಸೆ.27ರಂದು ಚುನಾವಣೆ ಮುಗಿಸಲು ನಿರ್ಧರಿಸಿದೆ. ಅದೇ ದಿನ ಸರ್ವಸದಸ್ಯರ ಸಭೆಯನ್ನೂ ನಡೆಸಿ ಬಿಸಿಸಿಐಗೆ ಪ್ರತಿನಿಧಿಗಳ ಪಟ್ಟಿಯನ್ನು ಕಳಿಸಲಿದೆ ಎಂದು ತಿಳಿದುಬಂದಿದೆ.

ರಾಜ್ಯ ಸಂಸ್ಥೆಗಳ ಚುನಾವಣೆಗೆ ಸ್ಪರ್ಧಿಸುವವರು ಸೆ 20ರೊಳಗೆ ನಾಮಪತ್ರ ಸಲ್ಲಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT