ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರುಣ್‌ ಚಕ್ರವರ್ತಿ ಬೌಲಿಂಗ್‌ಗೆ ಅನಿಲ್‌ ಕುಂಬ್ಳೆ ಮೆಚ್ಚುಗೆ

Published 28 ಏಪ್ರಿಲ್ 2023, 20:35 IST
Last Updated 28 ಏಪ್ರಿಲ್ 2023, 20:35 IST
ಅಕ್ಷರ ಗಾತ್ರ

ಮುಂಬೈ: ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಸ್ಪಿನ್ನರ್ ವರುಣ್ ಚಕ್ರವರ್ತಿ ಅವರ ಬೌಲಿಂಗ್ ಬಗ್ಗೆ ಭಾರತ ತಂಡದ ಮಾಜಿ ನಾಯಕ ಅನಿಲ್ ಕುಂಬ್ಳೆ ಸಂತಸ ವ್ಯಕ್ತಪಡಿಸಿದ್ದಾರೆ.

2020 ಮತ್ತು 2021ರ ಐಪಿಎಲ್ ಆವೃತ್ತಿಗಳಲ್ಲಿ ಚಕ್ರವರ್ತಿ 25 ವಿಕೆಟ್‌ಗಳನ್ನು ಗಳಿಸಿದ್ದರು. ಈ ಬಾರಿಯ ಟೂರ್ನಿಯಲ್ಲಿಯೂ ಅವರು 13 ವಿಕೆಟ್‌ಗಳನ್ನು ಗಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಕುಂಬ್ಳೆ, ‘ಚಕ್ರವರ್ತಿ ವಿಶೇಷ ಪ್ರತಿಭೆ ಇರುವ ಬೌಲರ್. ಅವರ ಬೌಲಿಂಗ್‌ನಲ್ಲಿ ಉತ್ತಮ ಶೈಲಿ ಹಾಗೂ ಎಸೆತಗಳಲ್ಲಿ ವೇಗವಿದೆ. ಚಕ್ರವರ್ತಿಯಂತಹ ಶೈಲಿಯ ಬೌಲರ್‌ಗಳು ವೇಗ ಕಡಿಮೆ ಮಾಡಿದರೆ ಪರಿಣಾಮಕಾರಿಯಾಗುವುದಿಲ್ಲ’ ಎಂದರು.

‘ಈ ವರ್ಷ ಅವರು ತಮ್ಮ ವೇಗದ ಲಯಕ್ಕೆ ಮರಳಿದ್ದಾರೆ. ಈ ವರ್ಷ ತವರಿನಾಚೆಯೂ ತಂಡಗಳು ಪಂದ್ಯ ಆಡಲಿವೆ. ಈ ಸಂದರ್ಭದಲ್ಲಿ ಪ್ರಯಾಣದ ಒತ್ತಡವನ್ನು ನಿರ್ವಹಿಸಿಕೊಂಡು ಆಡುವುದು ಕಷ್ಟ. ಆದರೂ ಚಕ್ರವರ್ತಿ ಒತ್ತಡ ಬಿಟ್ಟು ಆಡಿದ್ದಾರೆ’ ಎಂದು ಕುಂಬ್ಳೆ ಹೇಳಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT