ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮಾಜಿ ಅಧ್ಯಕ್ಷ ಶಹರ್ಯಾರ್ ಖಾನ್ ನಿಧನ

Published 23 ಮಾರ್ಚ್ 2024, 15:52 IST
Last Updated 23 ಮಾರ್ಚ್ 2024, 15:52 IST
ಅಕ್ಷರ ಗಾತ್ರ

ಲಾಹೋರ್‌: ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷರಾಗಿದ್ದ ಶಹರ್ಯಾರ್ ಖಾನ್ (89) ಅವರು ದೀರ್ಘಕಾಲದ ಅನಾರೋಗ್ಯದಿಂದ ಶನಿವಾರ ಇಲ್ಲಿ ನಿಧನರಾದರು. 2000ನೇ ಇಸವಿಯ ಆರಂಭದಲ್ಲಿ ಭಾರತದ ಜೊತೆ ಕ್ರಿಕೆಟ್‌ ಬಾಂಧವ್ಯ ಪುನರಾರಂಭಕ್ಕೆ ಅವರು ಶ್ರಮಿಸಿದ್ದರು.

ಭೋಪಾಲ್‌ನಲ್ಲಿ ಜನಿಸಿದ್ದ ಖಾನ್ ಅವರು ಭಾರತ ತಂಡದ ಮಾಜಿ ಕ್ಯಾಪ್ಟನ್ ಮನ್ಸೂರ್ ಅಲಿ ಖಾನ್ ಪಟೌಡಿ ಅವರ ಸೋದರ ಸಂಬಂಧಿ. ಪಾಕಿಸ್ತಾನದಲ್ಲಿ ಬೆಳೆದ ಅವರು ರಾಯಭಾರಿಯಾಗಿದ್ದರು. ಪಾಕ್‌ನ ವಿದೇಶಾಂಗ ಕಾರ್ಯದರ್ಶಿ ಆಗಿದ್ದ ಅವರು ನಂತರ ಭಾರತ ಮತ್ತು ಇಂಗ್ಲೆಂಡ್‌ಗೆ ಪಾಕ್‌ ರಾಯಭಾರಿ ಆಗಿದ್ದರು.

2003 ರಿಂದ 2006ರವರೆಗೆ ಅವರು ಪಿಸಿಬಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಭಾರತ ಎರಡು ಬಾರಿ ಪಾಕಿಸ್ತಾನ ಪ್ರವಾಸ ಕೈಗೊಂಡಿತ್ತು. ನಂತರ ದ್ವಿಪಕ್ಷೀಯ ಕ್ರಿಕೆಟ್‌ ಬಾಂಧವ್ಯ ಹಳಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT