ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಡಕ್ವರ್ಥ್–ಲೂಯಿಸ್ ನಿಯಮದ ರಚನೆಕಾರರಲ್ಲಿ ಒಬ್ಬರಾದ ಫ್ರ್ಯಾಂಕ್ ಡಕ್ವರ್ಥ್‌ ನಿಧನ

Published 25 ಜೂನ್ 2024, 16:30 IST
Last Updated 25 ಜೂನ್ 2024, 16:30 IST
ಅಕ್ಷರ ಗಾತ್ರ

ನವದೆಹಲಿ: ಕ್ರಿಕೆಟ್ ಪಂದ್ಯದ ವೇಳೆ ಮಳೆ ಬಂದಾಗ ಅನ್ವಯಿಸಲಾಗುವ ಡಕ್ವರ್ಥ್–ಲೂಯಿಸ್ ನಿಯಮದ ರಚನೆಕಾರರಲ್ಲಿ ಒಬ್ಬರಾದ ಫ್ರ್ಯಾಂಕ್ ಡಕ್ವರ್ಥ್‌ (84) ನಿಧನರಾಗಿದ್ದಾರೆ.

ಡಕ್ವರ್ಥ್ ಅವರು ಜೂನ್ 21ರಂದು ನಿಧನರಾಗಿರುವುದಾಗಿ ಇಎಸ್‌ಪಿಎನ್‌ಕ್ರಿಕ್‌ಇನ್ಫೋ ಡಾಟ್‌ ಕಾಮ್ ವೆಬ್‌ಸೈಟ್ ವರದಿ ಮಾಡಿದೆ. 

ಇಂಗ್ಲೆಂಡ್‌ನ ಸಂಖ್ಯಾಶಾಸ್ತ್ರಜ್ಞರಾದ ಡಕ್ವರ್ಥ್ ಮತ್ತು ಅವರ ಸಹೋದ್ಯೋಗಿ ಟೋನಿ ಲೂಯಿಸ್ ಅವರು ಸೇರಿ ಡಿಎಲ್‌ಎಸ್ ಪದ್ಧತಿ ರೂಪಿಸಿದ್ದರು.  1997ರಿಂದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಮಳೆಯಿಂದಾಗಿ ಸಮಯನಷ್ಟವಾದ ಪಂದ್ಯಗಳಿಗೆ ಈ ಪದ್ಧತಿ ಅನ್ವಯಿಸಲಾಗುತ್ತಿದೆ. ಗೆಲುವಿನ ಪರಿಷ್ಕೃತ ಗುರಿ ನಿಗದಿ ಮಾಡಲು ಇದು ಬಳಕೆಯಾಗುತ್ತಿದೆ. 2001ರಿಂದ ಐಸಿಸಿಯು (ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್) ಈ ಪದ್ಧತಿಗೆ ಮಾನ್ಯತೆ ನೀಡಿತ್ತು.

ಡಕ್ವರ್ಥ್ ಮತ್ತು ಲೂಯಿಸ್ ಅವರು ನಿವೃತ್ತರಾದ ನಂತರ ಈ ಪದ್ದತಿಯನ್ನು ಡಕ್ವರ್ಥ್‌–ಲೂಯಿಸ್‌–ಸ್ಟರ್ನ್ (ಡಿಎಲ್‌ಎಸ್) ಎಂದು ಮರುನಾಮಕರಣ ಮಾಡಲಾಗಿತ್ತು. ಸ್ಟೀವನ್ ಸ್ಟರ್ನ್ ಅವರು ಆಸ್ಟ್ರೇಲಿಯಾದ ಸಂಖ್ಯಾಶಾಸ್ತ್ರಜ್ಞರು.

2010ರಲ್ಲಿ ಡಕ್ವರ್ಥ್ ಮತ್ತು ಲೂಯಿಸ್ ಅವರಿಬ್ಬರಿಗೂ ಬ್ರಿಟಿಷ್ ಪ್ರಭುತ್ವದ ಸದಸ್ಯತ್ವ ಗೌರವ (ಎಂ.ಬಿ.ಇ) ಪ್ರದಾನ ಮಾಡಲಾಗಿತ್ತು. 

ಡಿಎಲ್‌ಎಸ್ ಪದ್ಧತಿಯು ಅತ್ಯಂತ ಕ್ಲಿಷ್ಟಕರ ಸಂಖ್ಯಾಶಾಸ್ತ್ರದ ಅಂಶಗಳನ್ನು ಒಳಗೊಂಡಿದೆ. ಇದರಲ್ಲಿ ಇನಿಂಗ್ಸ್‌ನಲ್ಲಿ ಉಳಿದಿರುವ ವಿಕೆಟ್‌ಗಳು ಮತ್ತು ನಷ್ಟವಾದ ಓವರ್‌ಗಳು ಸೇರಿದಂತೆ ಪ್ರಮುಖ ಅಂಶಗಳನ್ನು ಲೆಕ್ಕ ಹಾಕಿ ಎರಡನೇ ಇನಿಂಗ್ಸ್‌ ಬ್ಯಾಟಿಂಗ್ ಮಾಡುವ ತಂಡಕ್ಕೆ ಪರಿಷ್ಕೃತ ಗುರಿ ನೀಡಲಾಗುತ್ತದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT