ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೆಬಿನಾರ್‌ಗೆ ಹಾಜರಾಗಲು ನಿರಾಕರಿಸಿದ ಮಹಿಳಾ ಕುಸ್ತಿ ತಂಡದ ಕೋಚ್ ವಜಾ

Last Updated 26 ಜೂನ್ 2020, 16:20 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಮಹಿಳಾ ಕುಸ್ತಿ ತಂಡದ ಕೋಚ್, ಅಮೆರಿಕದ ಆ್ಯಂಡ್ರ್ಯೂ ಕುಕ್ ಅವರನ್ನು ವಜಾಗೊಳಿಸಲಾಗಿದೆ.

ಭಾರತ ಕ್ರೀಡಾ ಪ್ರಾಧಿಕಾರ (ಎಸ್‌ಎಐ) ಆಯೋಜಿಸಿದ್ದ ವೆನಿನಾರ್‌ನಲ್ಲಿ ಭಾಗವಹಿಸಲು ಕುಕ್ ಒಪ್ಪಿರಲಿಲ್ಲ.

’ಭಾರತ ಕ್ರೀಡಾ ಫೆಡರೇಷನ್ ಮತ್ತು ಸಾಯ್ ನಿರ್ಧಾರವು ನನಗೆ ಆಘಾತ ತಂದಿದೆ. ವೆಬಿನಾರ್‌ನ ಚರ್ಚಾ ವಿಷಯವನ್ನು ಬದಲಿಸುವಂತೆ ಕೇಳಿಕೊಂಡಿದ್ದೆ. ಆದರೆ, ಸಾಯ್ ನಿರಾಕರಿಸಿತ್ತು. ಆದ್ದರಿಂದ ನಾನು ಭಾಗವಹಿಸುವುದಿಲ್ಲವೆಂದು ಹೇಳಿದ್ದೆ‘ ಎಂದು ಕುಕ್ ಹೇಳಿದ್ದಾರೆ.

ಮಾರ್ಚ್‌ನಲ್ಲಿ ಲಾಕ್‌ಡೌನ್ ಆರಂಭವಾಗಿದ್ದರಿಂದ ಕುಸ್ತಿ ಶಿಬಿರಗಳನ್ನು ಸ್ಥಗಿತಗೊಳಿಸಲಾಗಿತ್ತು. ಆಗ ಕುಕ್ ತಮ್ಮ ದೇಶಕ್ಕೆ ಮರಳಿದ್ದರು.

ಅವರು ತಮ್ಮ ಬಾಕಿ ವೇತನ ನೀಡುವಂತೆ ಡಬ್ಲ್ಯುಎಫ್‌ಐಗೆ ಕೇಳಿದ್ದರು. ಆದರೆ ಇದುವರೆಗೆ ವೇತನ ಪಾವತಿಯಾಗಿರಲಿಲ್ಲ ಎನ್ನಲಾಗಿದೆ. ಇ ಪಾಠಶಾಲಾ ದಂತಹ ಆನ್‌ಲೈನ್ ಕಾರ್ಯಕ್ರಮಕ್ಕೂ ಅವರು ಒಪ್ಪಿಸರಲಿಲ್ಲ.

'ಅವರ ಈ ನಡವಳಿಕೆಯನ್ನು ಸಹಿಸಲು ಸಾಧ್ಯವಿಲ್ಲ ಭಾರತದ ಕುಸ್ತಿ ಬಗ್ಗೆ ಅವರಿಗೆ ಯಾವುದೇ ಪ್ರೀತಿ ಇಲ್ಲ. ಕೇವಲ ಸಂಬಳಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಅವರು ನಿರಾಕರಿಸಿದ ಸಂದೇಶಗಳ ಮೊಬೈಸ್ ಸ್ಕ್ರೀನ್‌ಶಾಟ್‌ಗಳನ್ನು ಸಾಯ್ ಅಧಿಕಾರಿಗಳು ನಮಗೆ ತೋರಿಸಿದ್ದಾರೆ'ಎಂದಿದ್ದಾರೆ.

2018ರಲ್ಲಿ ಡಬ್ಲ್ಯುಎಫ್‌ಐ ಶಿಫಾರಸಿನ ಮೇರೆಗೆ ಕುಕ್ ಅವರನ್ನು ಸಾಯ್ ನೇಮಕ ಮಾಡಿಕೊಂಡಿತ್ತು.

'ಸಾಯ್‌ ಎರಡು ದಿನಗಳ ಹಿಂದಷ್ಟೇ ನನ್ನ ವೇತನವನ್ನು ಪಾವತಿ ಮಾಡಿದೆ. ಮಾರ್ಚ್ ಮತ್ತು ಏಪ್ರಿಲ್ ತಿಂಗಳ ವೇತನ ಬಾಕಿ ಇತ್ತು.

' ಆರಂಭದಿಂದಲೇ ನಾನು ಭಾರತ ಕುಸ್ತಿ ತಂಡದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಪ್ರತಿದಿನ ಸಂಜೆ ಆರು (ಭಾರತೀಯ ಕಾಲಮಾನ) ಆನ್‌ಲೈನ್‌ ಮಾರ್ಗದರ್ಶನ ನೀಡುತ್ತಿದ್ದೇನೆಎಂದು ಸಿಯಾಟಲ್‌ನಲ್ಲಿರುವ ಕುಕ್ ಸ್ಪಷ್ಟಪಡಿಸಿದ್ದಾರೆ.

’ಅವರು ಆನ್‌ಲೈನ್ ತರಗತಿಗಳನ್ನು ತೆಗೆದುಕೊಂಡಿ್ದ್ದಾರೆ. ಕೆಡೆಟ್ ಮತ್ತು ಜೂನಿಯ್‌ ಕೋಚ್‌ಗಳು ಭಾಗವಹಿಸಿದ್ದರು. ಅಲ್ಲದೇ ಹಿರಿಯ ಕುಸ್ತಿಪಟುಗಳಾದ ಸರಿತಾ ಮೋರ್ ಮತ್ತು ಪಿಂಕಿ ಅವರೂ ಇದರಲ್ಲಿ ಭಾಗಿಯಾಗಿದ್ದರು‘ ಎಂದು ಹೆಸರು ಹೇಳಲಿಚ್ಛಿಸದ ಸಾಯ್ ಕೋಚ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT