ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನ್ಯೂಜಿಲೆಂಡ್‌: ಕೇಂದ್ರಿಯ ಗುತ್ತಿಗೆ ವ್ಯಾಪ್ತಿಗೆ ರಚಿನ್

Published 10 ಜುಲೈ 2024, 18:28 IST
Last Updated 10 ಜುಲೈ 2024, 18:28 IST
ಅಕ್ಷರ ಗಾತ್ರ

ಆಕ್ಲೆಂಡ್‌: ನ್ಯೂಜಿಲೆಂಡ್‌ನ ಆಲ್‌ರೌಂಡರ್‌, ಭಾರತ ಮೂಲದ ರಚಿನ್‌ ರವೀಂದ್ರ ಮೊದಲ ಬಾರಿ ನ್ಯೂಜಿಲೆಂಡ್‌ ಕ್ರಿಕೆಟ್‌ನ (ಎನ್‌ಝೆಡ್‌ಸಿ) ಕೇಂದ್ರೀಯ ಗುತ್ತಿಗೆ ಪಡೆದಿದ್ದಾರೆ.

ಮೂಲತಃ ಬೆಂಗಳೂರಿನವರಾದ 24 ವರ್ಷ ವಯಸ್ಸಿನ ರವೀಂದ್ರ ಕಳೆದ ವರ್ಷ ಭಾರತದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ನಲ್ಲಿ 578 ರನ್ ಗಳಿಸಿ ಗಮನ ಸೆಳೆದಿದ್ದರು. ಅತಿ ಹೆಚ್ಚು ರನ್ ಗಳಿಸಿದ್ದ ಆಟಗಾರರಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದರು.

ಐಪಿಎಲ್‌ ಹರಾಜಿನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ₹1.8 ಕೋಟಿ ಮೊತ್ತಕ್ಕೆ ಅವರನ್ನು ತನ್ನ ಪಾಲು ಮಾಡಿಕೊಂಡಿತ್ತು. ಐಸಿಸಿ 2023ರ ಉದಯೋನ್ಮುಖ ಆಟಗಾರ ಗೌರವಕ್ಕೂ ಅವರು ಪಾತ್ರರಾಗಿದ್ದರು. ಸರ್‌ ರಿಚರ್ಡ್‌ ಹ್ಯಾಡ್ಲಿ ಪದಕ ಪಡೆದ ಅತಿ ಕಿರಿಯ ಆಟಗಾರನೆಂಬ ಶ್ರೇಯವೂ ಅವರದಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT